ಬೆಳಗಾವಿ: ಕೂಡಲಸಂಗಮದಲ್ಲಿ (kudala sangama) ವಚನಗಳ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಘೋಷಣೆ ಮಾಡಬೇಕು ಎಂದು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಒತ್ತಾಯಿಸಿದರು.
ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕರ್ನಾಟಕ ಬಜೆಟ್ 2024 ಮಂಡಿಸಲಿದ್ದಾರೆ.
ಈ ಕುರಿತು ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಬಸವಣ್ಣನವರ ಲಿಂಗೈಕ್ಯೆ ಆಗಿದ್ದು ಕೂಡಲಸಂಗಮದಲ್ಲಿ. ಹೀಗಾಗಿ ಕೂಡಲಸಂಗಮದಲ್ಲಿ ವಚನಗಳ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕು. ನಾಳಿನ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಘೋಷಣೆ ಆಗಬೇಕು ಎಂದರು.
ಬಸವಣ್ಣನವರು ಕೂಡಲಸಂಗಮದಲ್ಲಿ ವಚನಗಳನ್ನು ಅಧ್ಯಯನ ಪ್ರಾರಂಭ ಮಾಡಿದ್ದರು. ಕೂಡಲಸಂಗಮದಲ್ಲಿಯೇ ಧರ್ಮ ಸ್ಥಾಪನೆಯಾಗಿದೆ. ಜೊತೆಗೆ ಕೂಡಲಸಂಗಮದಲ್ಲೇ ಬಸವಣ್ಣನವರು ಲಿಂಗೈಕ್ಯ ಆಗಿದ್ದರು. ಹಾಗಾಗಿ ಕೂಡಲಸಂಗಮದ ಶಾಸಕ ಕಾಶಪ್ಪನವರ ಅವರಿಗೂ ತಿಳಿಸಿದ್ದೇನೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.