ಕಲಬುರ್ಗಿ: ಇಲ್ಲಿನ ಓಂ ನಗರದ ಆಹಾರ ಸುರಕ್ಷತೆ ಮತ್ತು ಭದ್ರತಾ ಪ್ರಾಧಿಕಾರ ಕಚೇರಿಯ (FSSAI) ಮೇಲೆ ದಾಳಿ ನಡೆಸಿ ಇಬ್ಬರು ಆಹಾರ ನಿರೀಕ್ಷಕರನ್ನು(Food inspectors) ಲೋಕಾಯುಕ್ತ ಪೊಲೀಸರು (Lokayukta) ಬಂಧಿಸಿದ್ದಾರೆ
ಪರಮೇಶ್ವರ ಮಠಪತಿ ಹಾಗು ಕಿರಣ್ ಲೋಕಾ ಬಲೆಗೆ ಬಿದ್ದ ನಿರೀಕ್ಷರು
ನೀರು ಶುದ್ದೀಕರಣ ಆರ್‌ಓ ಪ್ಲಾಂಟ್ ಪರವಾನಗಿ ನವೀಕರಣ ಮಾಡಲು ಮೊಹ್ಮದ್ ಮುಖದ್ದೀರ್ ಎಂಬುವವರಿಂದ 40ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಲಾಗಿದೆ.
ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ಮಾರ್ಗದರ್ಶನದಲ್ಲಿ ದಾಳಿ ನಡೆದಿ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ