ಶಿವಮೊಗ್ಗ, : ನಮ್ಮ ಬಿಜೆಪಿ(BJP) ಪಕ್ಷದಲ್ಲಿ ಕೆಲವರು ಸಮಾಜದ ಹೆಸರಲ್ಲಿ ದೊಡ್ಡ ಸ್ಥಾನದಲ್ಲಿದ್ದಾರೆ. ಅಶೋಕನ ಕೆಳಗಡೆ ನಾನು ಉಪ ನಾಯಕ ಆಗಬೇಕಾ? ಕೆಲವು ವ್ಯಕ್ತಿಗಳ ಕೈಯಲ್ಲಿ ಈಗ ಪಕ್ಷ ಸೇರಿಕೊಂಡಿದೆ. ಬಲಿಪಶು ಮಾಡುವ ಕೆಲಸವನ್ನು ಕೆಲವರು ಮಾಡಿದರು. ಮ್ಯಾಲಿನವರು ಆಶೀರ್ವಾದ ಮಾಡಿದರೇ ರಾಜ್ಯದ ಇತಿಹಾಸವನ್ನು ಚೇಂಜ್ ಮಾಡುತ್ತೇನೆ ಎಂದು ಬಸಬಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಹೇಳಿದ್ದಾರೆ.
ಅಲ್ಲದೇ ಇದೇ ವೇಳೆ ಮುಂದಿನ ದಿನದಲ್ಲಿ ಐಪಿಎಸ್ ಅಧಿಕಾರಿಯೊಬ್ಬ ಅರೆಸ್ಟ್ ಆಗುತ್ತಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಅರೆಸ್ಟ್ ಆಗಲಿರುವ ಆ ಐಪಿಎಸ್ ಅಧಿಕಾರಿ ಯಾರು? ಯಾವ ಪ್ರಕರಣ? ಎಂದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
.ಶಿವಮೊಗ್ಗದಲ್ಲಿಂದು ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್, ಸ್ವಯಂ ಘೋಷಿಸಿತ ಲಿಂಗಾಯತ ನಾಯಕರೊಬ್ಬರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿಗೆ ಅಡ್ಡ ಹಾಕಿದರು. ಅವರು ಲಿಂಗಾಯಿತರೇ ಅಲ್ಲ. ರಾಜಕಾರಣದಲ್ಲಿ ನನ್ನ ತುಳಿಯುತ್ತಿದ್ದಾರೆ.
ಸಾಮಾಜಿ ಜಾಲತಾದಲ್ಲಿ ಯಾರು ವಿರೋಧ ಪಕ್ಷ ನಾಯಕನಾಗಬೇಕು? ಯಾರು ರಾಜ್ಯಾಧ್ಯಕ್ಷರಾಗಬೇಕು ಅಂದ್ರು. ಆಗ ಎಲ್ಲರು ಯತ್ನಾಳ್ ಮಾಡಬೇಕು ಅಂದ್ರು. ಆದ್ರೆ ಕೆಲವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ನನ್ನ ತಡೆದರು ಎಂದು ಸ್ವಪಕ್ಷದ ನಾಯಕರ ವಿರುದ್ಧ ಅದರಲ್ಲೂ ಪರೋಕಕ್ಷವಾಗಿ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.