ಅಥಣಿ: ‘ಹೆತ್ತವರ ಕಣ್ಣಲ್ಲಿ ನೀರು ತರಿಸುವವರು ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಂದು ಬಬಲಾದಿಯ ಮೂಲಸಂಸ್ಥಾನ ಮಠದ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನಂದೇಶ್ವರದಲ್ಲಿ ಸೋಮವಾರ ನಡೆದ ಗಡಾಮ ಮುತ್ಯಾ ಜಾತ್ರೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ‘ಇಂದು ಜನರ ನಡೆ, ನುಡಿ ಸರಿಯಾಗಿಲ್ಲ.
ಸಂಸ್ಕಾರದ ಕೊರತೆಯಿಂದ ವೃದ್ಧಾಶ್ರಮ, ಅನಾಥಾಶ್ರಮ ಹೆಚ್ಚುತ್ತಿರುವೆ. ಜನರು ಸ್ವಾರ್ಥಿಯಾಗುತ್ತಿದ್ದಾರೆ. ಹಾಗಾಗಿ ಜನರು ತಮ್ಮ ಮನಃ ಪರಿವರ್ತನೆ ಮಾಡಿಕೊಳ್ಳಬೇಕು. ನಿರಂತರವಾಗಿ ಪರೋಪಕಾರ ಮಾಡಬೇಕು. ಸತ್ಕಾರ್ಯ ಮಾಡುವವರಿಗೆ ಮಾತ್ರ ಈ ಭೂಮಿಯಲ್ಲಿ ಉತ್ತಮ ಭವಿಷ್ಯವಿದೆ’ ಎಂದರು.
ಹಳಿಂಗಳಿ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಾವಳಗಿಯ ಪರಶುರಾಮ ಮಹಾರಾಜರು, ಸಿದಗೌಡ ಪಾಟೀಲ, ಪರಶುರಾಮ ಶರಣರು, ಬಾಳಾಸಾಹೇಬ ಪಾಟೀಲ, ಶಿವು ಚಂಡಕಿ, ವಿರೂಪಾಕ್ಷ ಹಿರೇಮಠ, ಸಿದ್ರಾಮಯ್ಯ ಮಠಪತಿ, ರಾಮಣ್ಣ ಪರಟಿ, ಗುರುಲಿಂಗ ತೇಲಿ, ಹನುಮಂತ ಬಡಿಗೇರ, ಡಾ.ಸುಭಾಸ ಚಂಡಕಿ ಉಪಸ್ಥಿತರಿದ್ದರು. ಶಿವಾನಂದ ಪಾಟೀಲ ನಿರೂಪಿಸಿದರು. ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.