ಗದಗ, ಫೆಬ್ರವರಿ 12: ಅವಳಿ ನಗರದಲ್ಲಿ ಮತ್ತೆ ಪುಡಿ ರೌಡಿಗಳು(rowdies)ಅಟ್ಟಹಾಸ ಮೆರೆದಿದ್ದು, 20 ವರ್ಷದ ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವಂತಹ ಘಟನೆ ಗದಗನ ಬೆಟಗೇರಿಯ ಹುಯಿಲಗೋಳ ರಸ್ತೆಯಲ್ಲಿ ಫೆಬ್ರವರಿ 8 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಯುವಕ ತೇಜಸ್ ಮೇಹರವಾಡಿ ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಸಹೋದರಿಗೆ ಯಾಕೆ ಚುಡಾಯಿಸುತ್ತೀರಿ ಅಂತ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಆರೋಪ ಮಾಡಲಾಗಿದೆ. ಎಂಟು ಯುವಕರ ಗುಂಪಿನಿಂದ ಅಟ್ಯಾಕ್ ಮಾಡಿದ್ದು, ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಲಾಗಿದೆ. ಪುಡಿರೌಡಿಗಳ ಅಟ್ಟಹಾಸಕ್ಕೆ ಗದಗ-ಬೆಟಗೇರಿ ಅವಳಿ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹಲ್ಲೆಗೊಳಗಾದ ಯುವಕನಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಒಬ್ಬನೇ ಮಗನನ್ನು ಐಸಿಯುನಲ್ಲಿ ನೋಡಿ ಹೆತ್ತವರು ಆಸ್ಪತ್ರೆ ಮುಂದೆ ಕಣ್ಣೀರು ಹಾಕಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಾರಿಗೆ ಬಸ್ ಅಡ್ಡಗಟ್ಟಿದ ಪುಂಡರ ಗ್ಯಾಂಗ್: ಚಾಲಕನ ಮೇಲೆ ಹಲ್ಲೆ
ಹಾರ್ನ್ ಮಾಡಿದ್ದಕ್ಕೆ ಸಾರಿಗೆ ಬಸ್ ಅಡ್ಡಗಟ್ಟಿ ಪುಂಡರ ಗ್ಯಾಂಗ್ವೊಂದು ಚಾಲಕನ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಇತ್ತೀಚೆಗೆ ಗದಗ ಹೊರವಲಯದ ಅಸುಂಡಿ ಬಳಿ ನಡೆದಿತ್ತು. ಗದಗನಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಸಾರಿಗೆ ಬಸ್ ನಿಲ್ಲಿಸಿ ವಾಗ್ವಾದ ನಡೆಸಿದ್ದರು. ಅಸುಂಡಿ ಬಳಿ ಸ್ವಿಫ್ಟ್ ಕಾರ್ನಲ್ಲಿ ನಾಲ್ವರು ಹೊರಟ್ಟಿದ್ದರು. ಹಿಂಬದಿಯಿಂದ ಹೊರಟಿದ್ದ ಸಾರಿಗೆ ಬಸ್ ಚಾಲಕ ಹಾರ್ನ್ ಹಾಕಿದ್ದಾನೆ.