Breaking News

ಮೋದಿಯವರ ನಾಯಕತ್ವದಲ್ಲಿ ಇದು ಅತ್ಯಂತ ಯಶಸ್ವಿ ಅಧಿಕಾರಾವಧಿ: ಪ್ರಲ್ಹಾದ್ ಜೋಶಿ

Spread the love

ದೆಹಲಿ ಫೆಬ್ರುವರಿ 10: ಸಂಸತ್​​ನ ಬಜೆಟ್ ಅಧಿವೇಶನ( Parliament Budget session)ಮುಕ್ತಾಯದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವಪ್ರಲ್ಹಾದ್ ಜೋಶಿ(Pralhad Joshi) 17 ನೇ ಲೋಕಸಭೆಯ ಉತ್ಪಾದಕತೆಯನ್ನು ಶ್ಲಾಘಿಸಿದ್ದು ಇದರಲ್ಲಿ, 221 ಮಸೂದೆಗಳ ಅಂಗೀಕಾರವಾಗಿದೆ ಎಂದಿದ್ದಾರೆ. ಉಭಯ ಸದನಗಳು ಅಂಗೀಕರಿಸಿದ ಒಟ್ಟು ಮಸೂದೆಗಳ ಸಂಖ್ಯೆ 221. ಒಟ್ಟಾರೆಯಾಗಿ, ಕೆಲವು ಅಡಚಣೆಗಳು ಮತ್ತು ಇತರ ವಿಷಯಗಳಿವೆ.

ಆದರೆ ಪ್ರಧಾನಿ ಮೋದಿಯವರ (PM Modi) ನಾಯಕತ್ವದಲ್ಲಿ ಇದು ಅತ್ಯಂತ ಯಶಸ್ವಿ ಅಧಿಕಾರಾವಧಿಯಾಗಿದೆ. ಐತಿಹಾಸಿಕ ಮಸೂದೆಗಳನ್ನು ಅಂಗೀಕರಿಸಲಾಯಿತು. 17ನೇ ಲೋಕಸಭೆ ಮತ್ತು ರಾಜ್ಯಸಭೆಯ ಈಗಿನ ಸದಸ್ಯರು ನನ್ನ ಪ್ರಕಾರ ಅದೃಷ್ಟವಂತರು. ಅವರು ಹಳೆಯ ಸಂಸತ್ತು ಮತ್ತು ಹೊಸ ಸಂಸತ್ತಿನಿಂದಲೂ ಕಾರ್ಯನಿರ್ವಹಿಸಬಹುದು. ಮುಂದೆ ಬರುವವರು ಹೊಸ ಸಂಸತ್ತಿನಲ್ಲಿರುತ್ತಾರೆ, ಹಿಂದೆ ಇದ್ದವರು ಹಳೆಯ ಸಂಸತ್ತಿನಲ್ಲಿ ಮಾತ್ರ ಇದ್ದರು ಎಂದಿದ್ದಾರೆ.


Spread the love

About Laxminews 24x7

Check Also

ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಸಂತ್ರಸ್ತೆ

Spread the loveಮಂಗಳೂರು, ): ಪುತ್ತೂರು ಬಿಜೆಪಿ ಮುಖಂಡನ ಪುತ್ರನ (Puttur BJP leader Son )ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ