ಹೊಸದಿಲ್ಲಿ: ಪ್ರಧಾನಿ (PM) ನರೇಂದ್ರ ಮೋದಿ (narendra modi) ನೇತೃತ್ವದ ಸರ್ಕಾರ ಒಂದು ಸಮುದಾಯದ್ದೇ ಅಥವಾ ಒಂದು ಧರ್ಮಕ್ಕೆ ಸೇರಿದ್ದೇ ಅಥವಾ ದೇಶದ ಎಲ್ಲಾ ಧರ್ಮಗಳನ್ನು ಅನುಸರಿಸುವ ಜನರ ಸರ್ಕಾರವೇ ಎಂದು ಎಐಎಂಐಎಂ (AIMIM) ಸಂಸದ (MP) ಅಸಾದುದ್ದೀನ್ ಓವೈಸಿ (Asaduddin Owaisi) ಪ್ರಶ್ನಿಸಿದರು.
ಲೋಕಸಭೆಯಲ್ಲಿ(lok sabha) ಶನಿವಾರ ಮಾತನಾಡಿದ ಅವರು ಐತಿಹಾಸಿಕ ಅಯೋಧ್ಯೆ (ayodhya) ರಾಮ ಮಂದಿರ (ram mandir) ನಿರ್ಮಾಣ ಮತ್ತು ಪ್ರಾಣ ಪ್ರತಿಷ್ಠಾ ಕುರಿತು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮರ್ಯಾದಾ ಪುರುಷೋತ್ತಮ್ ಭಗವಾನ್ ಶ್ರೀರಾಮನನ್ನು ನಾನೂ ಗೌರವಿಸುತ್ತೇನೆ. ಆದರೆ ನಾಥೂರಾಂ ಗೋಡ್ಸೆಯನ್ನು ದ್ವೇಷಿಸುತ್ತೇನೆ. ಯಾಕೆಂದರೆ ಆತ ಕೊನೆಯ ಬಾರಿ ಹೇ ರಾಮ್ ಎಂದ ವ್ಯಕ್ತಿಯನ್ನೇ ಕೊಂದಿದ್ದಾನೆ ಎಂದರು.
ಮೋದಿ ನೇತೃತ್ವದ ಸರ್ಕಾರಕ್ಕೆ ಯಾವುದಾದರೂ ಧರ್ಮ ಇದೆಯೇ ಎಂದು ಪ್ರಶ್ನಿಸಿದ ಅವರು, ಈ ದೇಶದಲ್ಲಿ ಯಾವುದೇ ಧರ್ಮವಿಲ್ಲ ಎಂದು ನಾನು ನಂಬಿದ್ದೇನೆ ಎಂದರು.
ಜನವರಿ 22ರ ಸಂದೇಶ ಏನು ಎಂದು ಕೇಳಿದ ಅವರು, ಈ ಸರ್ಕಾರ ಒಂದು ಧರ್ಮವು ಇನ್ನೊಂದು ಧರ್ಮದ ವಿರುದ್ಧ ಗೆದ್ದಿದೆ ಎಂದು ತೋರಿಸಲು ಬಯಸುತ್ತದೆಯೇ, ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇದೆಯೇ, ದೇಶದ 17 ಕೋಟಿ ಮುಸ್ಲಿಮರಿಗೆ ಇದರಿಂದ ಏನು ಸಂದೇಶ ನೀಡಿದ್ದೀರಿ ಎಂದು ಪ್ರಶ್ನಿಸಿದರು.