Breaking News

ಯೋಧೆ ಪದ್ಮಶ್ರೀಗೆ ನಾಗರಿಕ ಸನ್ಮಾನ

Spread the love

ರಮಾನಂದವಾಡಿ: ‘ದೇಶಾಭಿಮಾನವೇ ನಮ್ಮ ಸೈನಿಕರಿಗೆ ಧೈರ್ಯ, ಶೌರ್ಯ ತುಂಬುತ್ತದೆ. ಹೀಗಾಗಿ ಸೈನಿಕರು ರಾಷ್ಟ್ರದ ರಕ್ಷಣೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡುವುದಕ್ಕೂ ಹಿಂದೆ ಸರಿಯುವುದಿಲ್ಲ. ಈ ದೇಶಾಭಿಮಾನ ಎಲ್ಲರಿಗೂ ಮಾದರಿ’ ಎಂದು ಮುಖಂಡ ಬಸವರಾಜ ಸನದಿ ಹೇಳಿದರು.

ರಾಯಬಾಗ ತಾಲ್ಲೂಕಿನ ಪ್ರಥಮ ಮಹಿಳಾ ಯೋಧರಾದ ಪದ್ಮಶ್ರೀ ಸಂಜು ವಾಳಕೆ ಅವರು ಜನವರಿ 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡು, ರಾಷ್ಟ್ರಪತಿ ಅವರಿಂದ ಗೌರವ ಪ್ರಶಸ್ತಿ ‍‍‍ಪಡೆದ ಕಾರಣ, ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

 

‘ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಪದ್ಮಶ್ರೀ, ಭಾರತೀಯ ಸೇನೆಯ ಐಟಿಬಿಪಿಯಲ್ಲಿ ನೇಮಕಾತಿ ಹೊಂದಿ, ಹರಿಯಾಣ ರಾಜ್ಯದ ಪಂಚಕುಲ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರೈಸಿ ಸೇವೆಗೆ ಹಾಜರಾಗಿದ್ದಾರೆ. ಮೊದಲನೇ ಅವಧಿಯಲ್ಲಿ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಿದ್ದು ಗಮನಾರ್ಹ ಸಾಧನೆ’ ಎಂದರು.

ಶಂಕರ ವಾಳಕೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿ.ಬಿ.ಚೌಗಲಾ, ಸಾತಪ್ಪ ಅಂಬಿ, ಶ್ರೀಧರ ಮೂಡಲಗಿ, ಅಸಫ್‌ಅಲಿ ಮುಲ್ಲಾ, ನಿಂಗಪ್ಪ ಮುರುಗನ್ನವರ, ಬಸಪ್ಪ ವಾಳಕೆ, ಕಲ್ಮೇಶ್ವರ ವಾಳಕೆ, ಸುರೇಶ ವಾಳಕೆ, ರತ್ನಪ್ಪ ವಾಳಕೆ, ಪಿ.ಎಸ್.ಮಿರ್ಜೆ, ದಿಲೀಪ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಇದ್ದರು.

ಇದಕ್ಕೂ ಮುನ್ನ ಗ್ರಾಮಕ್ಕೆ ಬಂದ ಪದ್ಮಶ್ರೀ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.


Spread the love

About Laxminews 24x7

Check Also

ತ್ರಿಕಾಲ ಪೂಜಿತೆ ದಾನಮ್ಮದೇವಿ ದರ್ಶನ ಪಡೆದ ಸಚಿವ ಎಂಬಿಪಿ; ಪ್ರವಚನ ಆಲಿಸಿ ಸ್ವಾಮೀಜಿ ಆಶಿರ್ವಾದ ಪಡೆದ ಸಚಿವರು

Spread the loveತ್ರಿಕಾಲ ಪೂಜಿತೆ ದಾನಮ್ಮದೇವಿ ದರ್ಶನ ಪಡೆದ ಸಚಿವ ಎಂಬಿಪಿ; ಪ್ರವಚನ ಆಲಿಸಿ ಸ್ವಾಮೀಜಿ ಆಶಿರ್ವಾದ ಪಡೆದ ಸಚಿವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ