ಬೆಳಗಾವಿ : ಉಮೇಶ ಕತ್ತಿಯವರನ್ನ ಮಂತ್ರಿ ಮಾಡಲು ಮೊದಲಿನಿಂದಲೂ ಒತ್ತಾಯ ಇದೆ. ರಾಜಕೀಯದಲ್ಲಿ ಹಿರಿಯರು ಇದ್ದಾರೆ. ಅವರಿಗೆ ಮಂತ್ರಿ ಸ್ಥಾನ ಸಿಕ್ಕರೆ ಒಳ್ಳೆಯದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಇದ್ದಿದ್ದಕ್ಕೆ ಕೆಲವು ಶಾಸಕರು ಇಲಾಖೆ ಕಾಮಗಾರಿ ಕುರಿತು ಭೇಟಿಗೆ ಬಂದಿದ್ದರು.ಬೇರೆ ಯಾವುದೇ ವಿಚಾರವಾಗಿ ಭೇಟಿಯಾಗಿಲ್ಲ ಎಂದರು.
ದೊಡ್ಡ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದು, ಮಂತ್ರಿ ಸ್ಥಾನ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ನನ್ನ ಮೇಲೆ ಗೌರವ ಇರುವುದಕ್ಕೆ ಕೆಲವರು ನನ್ನ ಬಳಿ ಬರ್ತಿದ್ದಾರೆ. ಎಲ್ಲದರಲ್ಲೂ ಎಂಟ್ರಿಯಾಗಬಾರದು ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರ ಪರವಾಗಿ ವಕಾಲತ್ತು ವಹಿಸುವುದಿಲ್ಲ ಎಂದು ಹೇಳಿದರು.
Laxmi News 24×7