ಮಂಗಳೂರು, ಫೆಬ್ರವರಿ 7: ಕೇಂದ್ರದ ಮಧ್ಯಂತರ ಬಜೆಟ್ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳುವ ಬರದಲ್ಲಿ ದಕ್ಷಿಣ ಭಾರತ ಪ್ರತ್ಯೇಕ ದೇಶದ ಬಗ್ಗೆ ಸಂಸದ ಡಿ.ಕೆ.ಸುರೇಶ್(DK Suresh)ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಈ ವಿಚಾರವಾಗಿ ಡಿಕೆ ಸುರೇಶ್ ವಿರುದ್ದದ ದೂರಿನ ವಿಚಾರಣೆಯನ್ನು ಮಂಗಳೂರು ಕೋರ್ಟ್ ಕೈಗೆತ್ತಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ದೂರುದಾರ ವಿಕಾಸ್ ಪುತ್ತೂರು ಪರ ವಕೀಲ ಮೋಹನ್ ರಾಜ್ ಕೆ.ಆರ್ ವಾದ ಮಂಡಿಸಿದ್ದಾರೆ.
ಎಫ್‌ಐಆರ್ ದಾಖಲಿಸಿ ಡಿಕೆ ಸುರೇಶ್ ವಿರುದ್ದ ತನಿಖೆ ನಡೆಸಲು ನಿರ್ದೇಶಿಸಲು ಮನವಿ ಮಾಡಿದ್ದು, ಆದರೆ ದೂರು ಅರ್ಜಿ ಸ್ವೀಕರಿಸಿದ ಮಂಗಳೂರಿನ 2ನೇ JMFC ನ್ಯಾಯಾಲಯ ಫೆ.12ಕ್ಕೆ ವಿಚಾರಣೆ ಮುಂದೂಡಿದೆ.
ಸಂಸದರಾಗಿರುವ ಕಾರಣ ಪ್ರಸ್ತುತ ನ್ಯಾಯಾಲಯದ ವ್ಯಾಪ್ತಿ ಬಗ್ಗೆ ಮುಂದಿನ ದಿನಾಂಕ ವಿಚಾರಣೆ ಸಾಧ್ಯತೆ ಇದೆ. ಡಿಕೆ.ಸುರೇಶ್ ವಿರುದ್ದ ಪ್ರಕರಣ ದಾಖಲಿಸುವಂತೆ ಬಿಜೆಪಿ ಮುಖಂಡ ವಿಕಾಸ್.ಪಿ ದೂರು ಅರ್ಜಿ ಸಲ್ಲಿಸಿದ್ದರು.