ಗದಗ: ಎಲ್.ಲೆ.ಅಡ್ವಾಣಿಗೆ (LK Advani) ಭಾರತ ರತ್ನ (Bharatha Rathna) ಸಂದ ಹಿನ್ನೆಲೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalingareddy), ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಅಡ್ವಾಣಿ ಅವರೂ ಕಾರಣ. ಅವರನ್ನು ಮೂಲೆಗುಂಪು ಮಾಡಿದ್ದೂ ಬಿಜೆಪಿನೇ.
ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವಂತೆ ಈಗ ಭಾರತ ರತ್ನ ಘೋಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಎಲ್.ಕೆ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದು ಸಂತೋಷ. ಆದರೆ ಈಗಲಾದರೂ ಬಿಜೆಪಿಯವರಿಗೆ (BJP) ಬುದ್ಧಿ ಬಂದು ಅವರಿಗೆ ಭಾರತ ರತ್ನ ಘೋಷಣೆ ಮಾಡಿದ್ದಾರೆ. ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಅಡ್ವಾಣಿ ಅವರೂ ಕಾರಣ. ಆದರೆ ಅವರನ್ನು ಪ್ರಧಾನಿ ಮೋದಿ (PM Narendra Modi) ಅಧಿಕಾರಕ್ಕೆ ಬಂದಮೇಲೆ ಮೂಲೆ ಗುಂಪು ಮಾಡಲಾಯಿತು ಎಂದಿದ್ದಾರೆ.
ಅಲ್ಲದೇ ರಾಜ್ಯ ರಾಜಕೀಯದ ಬಗ್ಗೆಯೂ ಮಾತನಾಡಿದ ಅವರು, ಪ್ರಹ್ಲಾದ್ ಜೋಷಿ (Pralhad Joshi) ಹಾಗೂ ಬಿ.ಎಲ್.ಸಂತೋಷ್ (BL Santosh) ಸೇರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ (BS Yediyurappa) ಏನು ಮಾಡಿದ್ರು? ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿದವರು ಯಾರು? ಇವರೆ ತಾನೇ ಇಳಿಸಿದ್ದು? ವಿಜಯೇಂದ್ರ (BY Vijayendra) ರಾಜ್ಯಾಧ್ಯಕ್ಷ ಆಗಬಾರದು ಎಂದು ಮೊನ್ನೆಯೂ ಏನೋ ಪ್ರಯತ್ನ ಮಾಡಿದರು. ಆದರೂ ಏನು ನಡಿಯಲಿಲ್ಲ. ಚುನಾವಣೆ ಬಂತಲ್ವಾ, ಅದಕ್ಕೆ ಯಡಿಯೂರಪ್ಪ ಮುಖ ನೋಡಿ ಮತ ಹಾಕುತ್ತಾರೆ ಎಂದು ಸುಮ್ಮನಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.