ಬೆಂಗಳೂರು, : ಕಾಂತರಾಜ ವರದಿ ಪಡೆಯುವುದಕ್ಕೆ 1 ತಿಂಗಳ ಟೈಮ್ ನೀಡಿದ್ದೀನಿ. ಆಮೇಲೆ ಸ್ವೀಕಾರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah)ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರದಿಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ಸರಿಪಡಿಸುತ್ತೇವೆ. ಜಾತಿಗಣತಿಗೆ ಕಾಂತರಾಜ ಸಮಿತಿ ರಚಿಸಿ ಹಣ ಬಿಡುಗಡೆ ಮಾಡಿದ್ದೆ. ಹೆಚ್ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಾಂತರಾಜ ಸಮಿತಿ ವರದಿ ಸ್ವೀಕರಿಸಲಿಲ್ಲ. ನಾನು ಕಾಂತರಾಜ ಸಮಿತಿ ವರದಿ ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ.
ಕಾಂತರಾಜ ಸಮಿತಿ ವರದಿ ಅವೈಜ್ಞಾನಿಕವಾಗಿದೆ ಎಂದು ಹೇಳುತ್ತಾರೆ. ಒಂದು ವೇಳೆ ಅವೈಜ್ಞಾನಿಕವಾಗಿದ್ದರೆ ಸಲಹೆ ಪಡೆದು ಸರಿಪಡಿಸುತ್ತೇವೆ ಎಂದಿದ್ದಾರೆ. ಭಾಷಣದ ಮಧ್ಯೆ ಜನರು ಕಾಂತರಾಜ ವರದಿ ಒಪ್ಪಿಕೊಳ್ಳಿ ಅಂತ ಮನವಿ ಮಾಡಿದ್ದು, ಆಗ ಸಿಎಂ ಕೇಳಿದ್ದೇ ಕೇಳ್ಳುತ್ತೀರ. ನಾನು ಹೇಳಿದ್ದೀನಿ, ಸಮಿತಿಯ ವರದಿ ಪಡುತ್ತೇನೆ. ಹಾಡಿದ್ದೇ ಹಾಡು ಕಿಸ್ಬಾಯಿ ದಾಸ ಅಂತ ಕೇಳಿದೆ ಕೇಳ್ತಿಯಲ್ಲಪ್ಪ ಅಂತ ನಗೆ ಚಟಾಕಿ ಸಿಡಿಸಿದರು.