Breaking News

ಕೃಷಿಗೆ ಮತ್ತೆ ಮನ್ನಣೆ ನೀಡುವ ದಿನ ಬರಲಿದೆ: ಬಾಬಾಸಾಹೇಬ ಪಾಟೀಲ

Spread the love

ನ್ನಮ್ಮನ ಕಿತ್ತೂರು: ‘ಒಕ್ಕಲುತನ ಮತ್ತು ಒಕ್ಕಲುತನ ಮಾಡುವವರು ಸಂಕಷ್ಟದಲ್ಲಿದ್ದಾರೆ. ಆದರೆ, ಕೃಷಿಗೆ ಒಳ್ಳೆಯ ಕಾಲ ಮತ್ತೆ ಬರಲಿದೆ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ ಇಲಾಖೆಯಿಂದ ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಯಂತ್ರೋಪಕರಣ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

 

‘ಕೃಷಿಗೆ ಸದ್ಯ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಕೃಷಿಯಿಂದ ವಿಮುಖರಾದವರು ಮರಳಿ ಬರುವ ಸಾಹಸ ಮಾಡುತ್ತಿಲ್ಲ. ಬಿತ್ತನೆ ಮಾಡಿದ ಬೆಳೆ ಕೈಗೆ ಸೇರಬೇಕೆಂದರೆ ಸಾವಿರ ಕುತ್ತುಗಳನ್ನು ರೈತ ದಾಟಿ ಬರುವ ಪರಿಸ್ಥಿತಿಯಿದೆ. ಬೇರೆ ಉದ್ಯೋಗದಲ್ಲಿ ಇಂತಹ ಸಂಕಷ್ಟದ ಪರಿಸ್ಥಿತಿಯಿಲ್ಲ’ ಎಂದು ವಿವರಿಸಿದರು.

ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ‘ಒಕ್ಕಲುತನದಲ್ಲಿ ಬದಲಾವಣೆ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಹೀಗಾಗಿ 180 ರೈತರಿಗೆ ತುಂತುರ ನೀರಾವರಿ, ಹೈಟೆಕ್ ಘಟಕಗಳ ಉಪಕರಣಗಳನ್ನು ವಿತರಣೆ ಮಾಡಲಾಗುತ್ತಿದೆ’ ಎಂದರು.

ಗುರುರಾಜ ಕುಲಕರ್ಣಿ, ಸುನೀಲ ಘೀವಾರಿ, ಮಡಿವಾಳಯ್ಯ ಹಿರೇಮಠ, ಸಂಗನಗೌಡ ಪಾಟೀಲ, ರೈತರು ಅಧಿಕಾರಿಗಳ ಭಾಗವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಸ್ವಾಗತಿಸಿದರು. ರೈತ ಸಂಪರ್ಕ ಕೇಂದ್ರ ಅಧಿಕಾರಿ ಮಂಜುನಾಥ ಕೆಂಚರಾಹುತ್ ನಿರೂಪಿಸಿದರು.


Spread the love

About Laxminews 24x7

Check Also

ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್…

Spread the love ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್… ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ