ಬೆಂಗಳೂರು: ಕೆರೆಗೋಡು (Keregodu) ಪ್ರಕರಣದಲ್ಲಿ ಬಿಜೆಪಿಯವರು (BJP) ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹರಿಹಾಯ್ದಿದ್ದಾರೆ. ಸೋಮವಾರ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ನಾನೊಬ್ಬ ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ.
ಆದರೆ ನಾನು ಎಲ್ಲ ಧರ್ಮಗಳನ್ನೂ ಪ್ರೀತಿಸುವ ಹಿಂದೂ ಎಂದರು.
ಅನಗತ್ಯವಾಗಿ ವಿವಾದ ಸೃಷ್ಟಿಸುವುದು ಬಿಜೆಪಿಯವರ ಅಜೆಂಡಾ ಆಗಿದೆ. ಅವರು ಪರ್ಮಿಷನ್ ತಗೆದುಕೊಂಡಿರೋದು ನ್ಯಾಷನಲ್ ಫ್ಲಾಗ್ ಮತ್ತು ಕನ್ನಡ ಧ್ವಜ ಹಾರಿಸ್ತೀವಿ ಅಂತ. ಆದರೆ ಹಾರಿಸಿದ್ದು ಕೇಸರಿ ಧ್ವಜವನ್ನು. ನಮಗೆ ಯಾವ ಬಾವುಟ ಹಾರಿಸಿದರೂ ವಿರೋಧವಿಲ್ಲ. ಆದರೆ ಡಿಸಿ ಕಚೇರಿ ಹತ್ತಿರ ಈ ರೀತಿಯೆಲ್ಲಾ ಮಾಡುತ್ತಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರು ಪ್ರತಿಭಟನೆ ಚುನಾವಣೆ ಹತ್ತಿರ ಬರುತ್ತಿದೆ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಇವೆಲ್ಲವೂ ಚುನಾವಣಾ ಪ್ರಚಾರದ ಸರಕುಗಳು ಎಂದು ಹರಿಹಾಯ್ದ ಸಿಎಂ ಸಿದ್ದರಾಮಯ್ಯ, ಪಂಚಾಯತಿ ಅವರು ಯಾವುದಕ್ಕೆ ಪರವಾನಗಿ ಕೊಟ್ಟಿದ್ದರೋ ಅದನ್ನೇ ಮಾಡಬೇಕಿತ್ತು. ಇಲ್ಲದಿದ್ದರೆ ಜಿಲ್ಲಾಡಳಿತ ಯಾಕೆ ಮಧ್ಯಪ್ರವೇಶ ಮಾಡುತ್ತಿತ್ತು ಎಂದರು.