Breaking News

ಮೂಡಲಗಿ: ಕಲ್ಮೇಶ್ವರಬೋಧ ಸ್ವಾಮಿ ಜಯಂತಿ

Spread the love

ಮೂಡಲಗಿ: ಮೂಡಲಗಿಯ ಶಿವಬೋಧರಂಗ ಮಠದ ಪವಾಡ ಪುರುಷ, ವಾಕ್ಸಿದ್ಧಿಪುರುಷ ಕಲ್ಮೇಶ್ವರಬೋಧ ಸ್ವಾಮಿಗಳ 119ನೇ ಜಯಂತಿಯನ್ನು ಭಾನುವಾರ ಕಲ್ಮೇಶ್ವರ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸಂಭ್ರಮದಿಂದ ಆಚರಿಸಿದರು.

ಕಲ್ಮೇಶ್ವರಬೋಧ ಸ್ವಾಮಿಗಳ ಅಶ್ವಾರೂಢ ಮೂರ್ತಿಗೆ ಶ್ರೀರಂಗ ಜೋಶಿ ಮತ್ತು ಪಂಚಯ್ಯ ಹಿರೇಮಠ ಅವರು ಪೂಜೆ ನೆರವೇರಿಸಿದರು.

ಕಲ್ಮೇಶ್ವರ ವೃತ್ತವನ್ನು ತಳಿರು ತೋರಣಗಳಿಂದ ವಿಶೇಷವಾಗಿ ಸಿಂಗಾರಗೊಳಿಸಿದ್ದರು. ಕಲ್ಮೇಶ್ವರಬೋಧ ಸ್ವಾಮೀಜಿಯವರಿಗೆ ಸೇರಿದ ಅಪಾರ ಭಕ್ತವೃಂದವು ಒಕ್ಕೊರಲಿನಿಂದ ಜಯಘೋಷಗಳನ್ನು ಹಾಕಿದರು.

ಪುರಸಭೆ ಸದಸ್ಯರು, ಮುಖಂಡರು, ಕಲ್ಮೇಶ್ವರಬೋಧ ಮೂರ್ತಿ ಪ್ರತಿಷ್ಠಾನ ಸಮಿತಿಯ ಅಣ್ಣಪ್ಪ ಅಕ್ಕನವರ, ಮನೋಹರ ಸಣ್ಣಕ್ಕಿ, ಹನಮಂತ ಸತರಡ್ಡಿ, ಸದಾಶಿವ ನಿಡಗುಂದಿ, ಮಹಾದೇವ ಶೆಕ್ಕಿ, ಶಿವಬಸು ಸುಣಧೋಳಿ, ಶ್ರೀಕಾಂತ ಪತ್ತಾರ, ಚೇತನ ನಿಶಾನಿಮಠ, ಪ್ರಕಾಶ ಮಾಲಗಾರ, ಅಜ್ಜಪ್ಪ ಅಂಗಡಿ, ಕುಮಾರ ಗಿರಡ್ಡಿ, ಜಗದೀಶ ತೇಲಿ, ಆನಂದ ಬಳಿಗಾರ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ