Breaking News

ಅಜ್ಜನ ಜಾತ್ರೆ: ನಾಲ್ಕೂವರೆ ಲಕ್ಷ ಭಕ್ತರಿಗೆ ದಾಸೋಹದಲ್ಲಿ ಮಿರ್ಚಿ ಸೇವೆ

Spread the love

ಕೊಪ್ಪಳ: ಇಲ್ಲಿನ ಗವಿಮಠದ ಜಾತ್ರೆಯ ಮಹಾದಾಸೋಹದಲ್ಲಿ ಎರಡನೇ ದಿನವಾದ ಭಾನುವಾರ ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯ ಮಿರ್ಚಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮಿರ್ಚಿ ತಯಾರಿಕೆಗೆ ಕೊಪ್ಪಳದ ಸಮಾನ ಮನಸ್ಕ ಸ್ನೇಹಿತರು ಮಿರ್ಚಿ ಸೇವಾ ಬಳಗ ಆರಂಭಿಸಿದ್ದು ಈ ಬಾರಿ ಸೇವಾ ಕಾರ್ಯದಲ್ಲಿ ಗಣ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

 

ದಾಸೋಹಕ್ಕಾಗಿ ಬರುವ ಲಕ್ಷಾಂತರ ಭಕ್ತರಿಗೆ ಮಿರ್ಚಿ ಉಣಬಡಿಸಿದರು. ಬೆಳಗಿನ ಜಾವವೇ ಆರಂಭವಾಗಿದ್ದು 400 ಬಾಣಸಿಗರು ಈ ಕಾರ್ಯದಲ್ಲಿ ಭಾಗಿಯಸದರು. ಮಿರ್ಚಿ ರುಚಿಗೆ ಮನಸೋತ ಭಕ್ತರು ನಾಲ್ಕೈದು ಮಿರ್ಚಿಗಳನ್ನು ತಿನ್ನುವ ಜೊತೆಗೆ ಲಕ್ಷಾಂತರ ಪ್ರಮಾಣದಲ್ಲಿ ಹೇಗೆ ತಯಾರಿಸಲಾಗುತ್ತದೆ ಎನ್ನುವ ಕುತೂಹಲದಿಂದಲೂ ಜನ ಮಿರ್ಚಿ ತಯಾರಿಸುವ ದಾಸೋಹ ಮನೆಗೆ ಭೇಟಿ ನೀಡಿ ಕುತೂಹಲ ತಣಿಸಿಕೊಳ್ಳುತ್ತಿದ್ದಾರೆ.

ಒಟ್ಟು ನಾಲ್ಕೂವರೆ ಲಕ್ಷ ಮಿರ್ಚಿ ತಯಾರಿಕೆ ಆಗಲಿದ್ದು ಇದಕ್ಕಾಗಿ 25 ಕ್ವಿಂಟಲ್ ಹಸೆ ಹಿಟ್ಟು, 10 ಬ್ಯಾರಲ್ ಅಡುಗೆ ಎಣ್ಣೆ, 20 ಕ್ವಿಂಟಲ್ ಮೆಣಸಿನಕಾಯಿ, 60 ಕೆ.ಜಿ. ಅಜಿವಾನ, 60 ಕೆ.ಜಿ. ಉಪ್ಪು, ಸೊಡಾಪುಡಿ ಬಳಕೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದರು.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಿರ್ಚಿ ಮಾಡಲು ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ವಿಜಯನಗರ ಜಿಲ್ಲೆಗಳಿಂದ ಜನರೇ ಬಾಣಸಿಗರಾಗಿ ಬಂದು ಯಾವುದೇ ಫಲಾಪೇಕ್ಷೆಯಿಲ್ಲದೆ ಮಿರ್ಚಿ ಹಾಕಿದರು. ಅಜ್ಜನ ದೊಡ್ಡ ಜಾತ್ರೆಗೆ ನಮ್ಮದು ಸಣ್ಣ ಸೇವೆ ಇರಲಿ ಎಂದು ಮಿರ್ಚಿ ತಯಾರಿಸುವ ಕೆಲಸ ಮಾಡುತ್ತಾರೆ.

‘ಅಜ್ಜನ ಜಾತ್ರೆಯಲ್ಲಿ ಮಿರ್ಚಿ ಹಾಕುವುದನ್ನು ಸೇವೆ ಎಂದುಕೊಂಡು ಎಲ್ಲರೂ ಭಾಗಿಯಾಗುತ್ತಾರೆ. ಸೇವೆ ಮಾಡಲು ಭಕ್ತರು ಸರತಿಯಲ್ಲಿ ಕಾಯುತ್ತಾರೆ. ಹೀಗಾಗಿ ಪ್ರತಿವರ್ಷ ಮಿರ್ಚಿ ನೀಡುವ ಕಾರ್ಯ ಯಶಸ್ವಿಯಾಗುತ್ತಿದೆ’ ಎಂದು ಬಳಗದ ಪ್ರಮುಖ ರಮೇಶ ತುಪ್ಪದ ತಿಳಿಸಿದರು.


Spread the love

About Laxminews 24x7

Check Also

ಕ್ಯಾನ್ಸರ್ ಪೀಡಿತನಿಂದ ವಿದ್ಯಾರ್ಥಿನಿ ಕೊಲೆ ಕೇಸ್​: ಪ್ರೀ ಪ್ಲ್ಯಾನ್ಡ್ ಮರ್ಡರ್ ರಹಸ್ಯ ಬಯಲು

Spread the loveಚಿತ್ರದುರ್ಗ, ಆಗಸ್ಟ್​ 21: ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಚೇತನ್​​ನಿಂದಲೇ ವಿದ್ಯಾರ್ಥಿನಿ (student) ವರ್ಷಿತಾ(19) ಕೊಲೆ (kill) ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಡಿವೈಎಸ್​ಪಿ ಪಿ.ದಿನಕರ್, ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ