Breaking News

ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಮಿರ್ಚಿ ದಾಸೋಹ- ಸಿದ್ದವಾಗುತ್ತಿವೆ ಲಕ್ಷ ಲಕ್ಷ ಮಿರ್ಚಿ

Spread the love

ಕೊಪ್ಪಳ, ಜನವರಿ 28: ಉತ್ತರ ಕರ್ನಾಟಕ (North Karnataka) ಭಾಗದ ಸುಪ್ರಸಿದ್ಧ ತಿನಿಸು ಅಂದರೇ ಅದು ಮಿರ್ಚಿ. ಮುಂಜಾನೆ ಉಪಹಾರವಿರಲಿ, ಮಧ್ಯಾಹ್ನ ಊಟವಿರಲಿ ಮಿರ್ಚಿ (Mirchi) ನೀಡಿದರೇ ಯಾರು ಬೇಡ ಅನ್ನುವುದಿಲ್ಲ. ಜಾತ್ರೆಗೆ (Fair) ಬಂದ ಲಕ್ಷಾಂತರ ಮಂದಿಗೆ ಇಂದು (ಜ.28) ಇಡೀ ದಿನ ಊಟದಲ್ಲಿ ಬೇಕಾದಷ್ಟು ಮಿರ್ಚಿ ನೀಡಲಾಗುತ್ತದೆ. ಇಂತಹದೊಂದು ಮಿರ್ಚಿ ಜಾತ್ರೆ ನಡೆಯುವುದು ಕೊಪ್ಪಳದಗವಿಮಠದಲ್ಲಿ (Koppal Gavimath Fair) . ಹೌದು ಗವಿಮಠದ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಉತ್ತರ ಕರ್ನಾಟಕ ಮಂದಿಯ ನೆಚ್ಚಿನ ತಿನಿಸನ್ನು ಜಾತ್ರೆಯ ದಾಸೋಹದಲ್ಲಿ ಕೂಡಾ ನೀಡಬೇಕು ಎಂಬ ಇಚ್ಛೆ ಹೊಂದಿದ್ದಾರೆ. ಹೀಗಾಗಿ ಅನೇಕ ವರ್ಷಗಳಿಂದ ಜಾತ್ರೆಯಲ್ಲಿ ಮಿರ್ಚಿ ದಾಸೋಹ ನಡೆಯುತ್ತಿದೆ.

 

ಕೊಪ್ಪಳದ ಸುಪ್ರಸಿದ್ಧ ಗವಿಮಠದ ಜಾತ್ರೆ ಶನಿವಾರ (ಜ.27) ರಿಂದ ಆರಂಭವಾಗಿದೆ. ಎರಡನೇ ದಿನದ ಜಾತ್ರೆಯನ್ನು ಭಕ್ತರು ಮಿರ್ಚಿ ಜಾತ್ರೆ ಅಂತಲೇ ಕರೆಯುತ್ತಾರೆ. ಇದಕ್ಕೆ ಕಾರಣ ರವಿವಾರ (ಜ.28) ಮಠದ ಮಹಾ ದಾಸೋಹದಲ್ಲಿ ಪ್ರಸಾದಕ್ಕೆ ಬರುವವರಿಗೆ ಊಟದ ಜೊತೆಗೆ ಮಿರ್ಚಿಯನ್ನು ಕೇಳಿದಷ್ಟು ನೀಡುತ್ತಾರೆ. ಅದಕ್ಕಾಗಿಯೇ ಲಕ್ಷ ಲಕ್ಷ ಮಿರ್ಚಿ ತಯಾರಿಕೆ ನಸುಕಿನ ಜಾವ ಐದು ಗಂಟೆಗೆ ಆರಂಭವಾಗಿದ್ದು, ರಾತ್ರಿ ಹನ್ನೆರಡು ಗಂಟೆವರಗೆ ಮಿರ್ಚಿ ಮಾಡುವ ಕೆಲಸ ಒಂದಡೆ ನಡೆದರೆ ಮಿರ್ಚಿ ನೀಡುವ ದಾಸೋಹ ಮತ್ತೊಂದಡೆ ನಡೆಯುತ್ತದೆ.


Spread the love

About Laxminews 24x7

Check Also

ರೈತನಿಗೆ ದೋಷಯುತ ಕೊಯ್ಲುಯಂತ್ರ ನೀಡಿದ ಕಂಪನಿಗೆ ದಂಡ ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ

Spread the love ರೈತನಿಗೆ ದೋಷಯುತ ಕೊಯ್ಲುಯಂತ್ರ ನೀಡಿದ ಕಂಪನಿಗೆ ದಂಡ ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ ಧಾರವಾಡ – …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ