ಕೊಪ್ಪಳ, ಜನವರಿ: : ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಯಾಗಿದೆ. ಹನುಮಂತನ ಆಶೀರ್ವಾದವಿದ್ದರೆ ನಾನು ಮತ್ತೆ ಶೀಘ್ರದಲ್ಲಿ ಬಳ್ಳಾರಿಗೆ ಹೋಗುತ್ತೇನೆ ಎಂದು ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಸೋಮವಾರ ಅಂಜನಾದ್ರಿಯಲ್ಲಿ ಹನುಮನ ಪೂಜೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ಇಂದು ಕೇವಲ ಭಾರತ ದೇಶವಲ್ಲ ಇಡೀ ವಿಶ್ವದಲ್ಲಿಯೇ ಸಂತೋಷವಾಗಿದೆ.
ರಾಮಮೂರ್ತಿ ಪ್ರತಿಷ್ಠಾಪನೆಯ ವಿಷಯದಲ್ಲಿ ಸಂತೋಷಪಡುವ ಮೊದಲ ವ್ಯಕ್ತಿ ಎಂದರೆ ಅದು ಹನುಮಂತ ಎಂದು ಹೇಳಿದರು. ಹನುಮಂತ ಕೊಪ್ಪಳ ಜಿಲ್ಲೆಯಲ್ಲಿ ಜನಿಸಿದ್ದಾನೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ರಾಮಲಲ್ಲಾ ಮೂರ್ತಿಗೆ ಹಾಗೂ ಅಂಜನಾದ್ರಿಯಲ್ಲಿ ಏಕಕಾಲದಲ್ಲಿ ಮಹಾಮಂಗಳಾರತಿ ಆಗೋದನ್ನು ನೋಡೋದೆ ಪುಣ್ಯ ಎಂದರು. ರಾಮ ಭಕ್ತಿ ಅಂದ್ರೆ ಅದು ರಾಷ್ಟ್ರಭಕ್ತಿ. ದೇಶದ ಎಲ್ಲ ಜನರ ಜೊತೆಗೆ ಅಂಜನಾದ್ರಿಯಲ್ಲೂ ಹನುಮ ಸಂಭ್ರಮಿಸಿದ್ದಾನೆ. ಅಯೋಧ್ಯೆ ಹೇಗೆ ಅಭಿವೃದ್ಧಿಯಾಗಿದೆಯೋ ಅದೇ ರೀತಿ ಅಂಜನಾದ್ರಿ ಅಭಿವೃದ್ಧಿಗಾಗಿ, ಆಂಜನೇಯನ ಸೇವೆ ಮಾಡುತ್ತೇನೆ.
ಅಂಜನಾದ್ರಿಯೂ ವಿಶ್ವಮಟ್ಟದಲ್ಲಿ ಅಭಿವೃವೃದ್ಧಿಯಾಗೋದ್ರಲ್ಲಿ ಸಂದೇಹವಿಲ್ಲ. ಹನುಮನ ಸೇವೆಯೊಂದನ್ನು ಬಿಟ್ಟು ದೊಡ್ಡ ಪದವಿ ಯಾವುದು ಇಲ್ಲ. ಭಗವಂತನ ಸೇವೆ ಮಾಡಲು ಶಕ್ತಿ ಕೊಡು ಎಂದು ಸಂಕಲ್ಪ ಮಾಡಿದ್ದೇನೆ. ಹನುಮಂತ, ಕಲಿಯುಗದಲ್ಲಿ ನಮ್ಮ ನಡುವೆ ಇರುವ ಪ್ರತ್ಯಕ್ಷವಾಗಿ ಓಡಾಡುವ ದೇವರು ಎಂದರು. ಮಂಡಲ ಪೂಜೆ ಸಮಯಕ್ಕೆ ಗಂಗಾವತಿ ಕ್ಷೇತ್ರದಿಂದ ತುಂಗಾಭದ್ರಾ ಜಲ ತೆಗೆದುಕೊಂಡು ಹೋಗುತ್ತೇವೆ. 108 ಬಂಗಾರ ಲೇಪಿತ ಕಲಶಗಳನ್ನು ತೆಗೆದುಕೊಂಡು ಹೋಗುತ್ತೇವೆ.
ಇಡೀ ಒಂದು ರೈಲನ್ನು ಬುಕ್ ಮಾಡಿ ಅಯೋಧ್ಯೆಗೆ ಹೋಗುತ್ತೇನೆ. ಅತ್ತ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದ್ದರೆ. ಇತ್ತ ಅಂಜನಾದ್ರಿ ಬೆಟ್ಟದಲ್ಲಿ ಸಂಭ್ರಮ ಮನೆ ಮಾಡಿತ್ತು. ರಾಮ,ಆಂಜನೇಯನ ಭಜನೆ ಮಾಡುವ ಮೂಲಕ.ಆರ್ಟ್ ಆಫ್ ಲಿವಿಂಗ್ ನ ತಂಡದಿಂದ ಭಜನೆ ಮಾಡಿದರು.ಗಂಗಾವತಿ ತಾಲೂಕಿನ ಆಂಜನೇಯನ ಬೆಟ್ಟದಲ್ಲಿ ಭಜನೆಭಜನೆಗೆ ಹೆಜ್ಜೆ ಹಾಕಿದ ಶ್ರೀರಾಮ,ಆಂಜನೇಯನ ವೇಷಧಾರಿಗಳು ಸಂತಸದಿಂದ ಸಾಧುಗಳು ಕುಪ್ಪಳಿಿಸಿದರು. ಅಯೋಧ್ಯೆ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಂಜನಾದ್ರಿಯಲ್ಲಿ ದೀಪೋತ್ಸವ ನರೆವೇರಿದೆ. ಅಂಜನಾದ್ರಿಯ 575 ಮೆಟ್ಟಲು ಗಳಲ್ಲಿ ದೀಪ ಹಚ್ಚಿ ಸಂಭ್ರಮ ಮನೆ ಮಾಡಿತ್ತು. ಇದೇ ವೇಳೆ ಆಂಜನೇಯ ನ ದೇವಸ್ಥಾನ ಹೂವಿನಿಂದ ಅಲಂಕಾರ ಮಾಡಲಾಗಿದೆ.