Breaking News

ಕರ್ನಾಟಕದಲ್ಲಿ ಇಂದು 89 ಮಂದಿಗೆ ಕೊರೊನಾ ಸೋಂಕು ದೃಢ; ಎಷ್ಟು ಸಾವು, ಗುಣಮುಖ ಕೇಸ್​ಎಷ್ಟು?

Spread the love

ಬೆಂಗಳೂರು, : ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 3336 ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 89 ಮಂದಿಗೆ ಕೊರೊನಾ ಸೋಂಕು (Karnataka Covid Case) ತಗುಲಿರುವುದು ದೃಢಪಟ್ಟಿದೆ. ಒಬ್ಬ ಸೋಂಕಿತ ಮೃತಪಟ್ಟಿದ್ದು, 74 ಸೋಂಕಿತರು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಬೆಂಗಳೂರಿನಲ್ಲಿ(Bengaluru) 16 ಮಂದಿಗೆ ಕೋವಿಡ್ ದೃಢಪಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಬ್ಬ ಸೋಂಕಿತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 2.66 ರಷ್ಟಿದೆ. ಒಟ್ಟು 497 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

 

ಜಿಲ್ಲಾವಾರು ಕೊರೊನಾ ಸೋಂಕು ಪ್ರಕರಣಗಳು

ಬೆಂಗಳೂರಿನಲ್ಲಿ ಇಂದು 16 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬಾಗಲಕೋಟೆ 1, ಬಳ್ಳಾರಿ 1, ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 4, ಚಾಮರಾಜನಗರ 1, ಚಿಕ್ಕಬಳ್ಳಾಪುರ 2, ಚಿತ್ರದುರ್ಗ 2, ದಕ್ಷಿಣ ಕನ್ನಡ 6, ಧಾರವಾಡ 2, ಗದಗ 2, ಹಾಸನ 5, ಕಲಬುರಗಿ 1, ಕೊಡಗು 4, ಕೊಪ್ಪಳ 2, ಮಂಡ್ಯ 1, ಮೈಸೂರು 14, ರಾಯಚೂರು 1, ರಾಮನಗರ 1, ಶಿವಮೊಗ್ಗ 3, ತುಮಕೂರು 8, ಉತ್ತರ ಕನ್ನಡ 1, ವಿಜಯನಗರ 5, ವಿಜಯಪುರ ಜಿಲ್ಲೆಯಲ್ಲಿ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.


Spread the love

About Laxminews 24x7

Check Also

ಲಿಂಗಾಯತ ಮತ್ತು ಮುಸ್ಲಿಂ ಧರ್ಮ ಒಂದೇ ಅನ್ನೋದು ತಪ್ಪು: ಪಂಡಿತಾರಾಧ್ಯಶ್ರೀ ಅಭಿಪ್ರಾಯ ವಿರೋಧಿಸಿದ ವಚನಾನಂದಶ್ರೀ

Spread the loveಚಿತ್ರದುರ್ಗ, ಸೆಪ್ಟೆಂಬರ್ 7: ಲಿಂಗಾಯತ ಮತ್ತು ಮುಸ್ಲಿಂ ಧರ್ಮ ಒಂದೇ ಎಂಬರ್ಥದಲ್ಲಿ ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶ್ರೀಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ