ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅಯೋದ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಇಂದು ಹುಬ್ಬಳಿಯಿಂದ ವಿಶೇಷ ವಿಮಾನದ ಮೂಲಕ ತೆರಳಿದರು.
ಅಯೋದ್ಯೆಯ ಶ್ರೀರಾಮ ಮಂದಿರ ಟ್ರಸ್ಟ್ ಡಾ. ಕೋರೆ ಅವರಿಗೆ ಆಹ್ವಾನ ನೀಡಿದ್ದು, ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ. ಹುಬ್ಬಳ್ಳಿಯಿಂದ ವಿಶೇಷ ವಿಮಾನದ ಮೂಲಕ ಕೆಎಲ್ ಇ ಸಂಸ್ಥೆಯ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ, ಸ್ವರ್ಣ ಜ್ವೆಲರ್ಸ ಗ್ರುಪನ ಅಧ್ಯಕ್ಷರಾದ ಪ್ರಸಣ್ಣಾ ಅವರು ಸೇರಿದಂತೆ ಸುಮಾರು 8 ಜನರ ತಂಡವು ಪ್ರಯಾಣ ಬೆಳೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪ್ರಭಾಕರ ಕೋರೆ ಅವರು, ನಾಳೆಯ ದಿನ ಜೀವನದಲ್ಲಿ ಅತ್ಯಂತ ಸುದಿನ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಕಣ್ತುಂಬಿಕೊಳ್ಳುತ್ತಿದ್ದೇವೆ.
ಸುಮಾರು ಮೂರು ದಶಕಗಳ ಕಾಲ ಮಂದಿರ ನಿರ್ಮಾಣ ಹಾಗೂ ಶ್ರೀರಾಮನ ದರ್ಶನಕ್ಕಾಗಿ ಜನ ಕಾಯ್ದು ಕುಳಿತಿದ್ದರು. ಇಂದು ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಶ್ರೀಮಾನ ದರ್ಶನಕ್ಕೆ ಅವಕಾಶ ಮಾಡಿ ಕಾಯುವುದರಿಂದ ಮುಕ್ತಿ ನೀಡಿದ್ದಾರೆ ಎಂದರು.