ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಗುರುವಾರ ಬೆಳಗಿನ ಜಾವದ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಚತುರ್ಥ ಪರ್ಯಾಯ ಆರಂಭಿಸಿದರು. ಉಡುಪಿ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಗುರುವಾರ ಬೆಳಗಿನ ಜಾವದ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಚತುರ್ಥ ಪರ್ಯಾಯ ಆರಂಭಿಸಿದರು.
ಶ್ರೀ ಮಧ್ವಾಚಾರ್ಯರ ದ್ವೈತ ತತ್ವವನ್ನು ವಿಶ್ವದಾದ್ಯಂತ ಪ್ರಚಾರ ಮಾಡುವ ಧ್ಯೇಯ ಹೊಂದಿರುವ ಪ್ರಗತಿಪರ ದೃಷ್ಟಿಗೆ ಹೆಸರಾದ ಉಡುಪಿಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಗುರುವಾರ ಬೆಳ್ಳಂಬೆಳಗ್ಗೆ ಪರ್ಯಾಯ ಪೀಠಾರೋಹಣ ಮಾಡಿದರು. ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರಿಗೆ ಅಕ್ಷಯಪಾತ್ರೆ ಹಾಗೂ ಶ್ರೀಕೃಷ್ಣಮಠದ ಕೀಲಿಕೈ ಹಸ್ತಾಂತರಿಸಿದರು.
ಈ ಅಕ್ಷಯಪಾತ್ರೆ ಮತ್ತು ಶ್ರೀಕೃಷ್ಣಮಠದ ಕೀಲಿಕೈ ಹಸ್ತಾಂತರವು ಎರಡು ವರ್ಷಗಳ ಕಾಲ ಶ್ರೀಕೃಷ್ಣಮಠದ ಆಡಳಿತವನ್ನು ಶ್ರೀಕೃಷ್ಣಾಪುರ ಮಠದಿಂದ ಶ್ರೀ ಪುತ್ತಿಗೆ ಮಠಕ್ಕೆ ಹಸ್ತಾಂತರಿಸುವ ಸಂಕೇತವಾಗಿದೆ. ಬುಧವಾರ ಮತ್ತು ಗುರುವಾರ ನಡೆದ ಪರ್ಯಾಯ ಮಹೋತ್ಸವದಲ್ಲಿ ಸುಮಾರು ಎರಡು ಲಕ್ಷ ಭಕ್ತರು ಪಾಲ್ಗೊಂಡಿದ್ದರು.