Breaking News

ಭ್ರೂಣಲಿಂಗ ಪತ್ತೆ ಹಾಗೂ ನಕಲಿ ವೈದ್ಯರ ಜಾಲ ಪತ್ತೆಗೆ ಸಂತ್ರಸ್ತರ ರೂಪದಲ್ಲಿ ಡಿಕಾಯ್​​ ಆಪರೇಶನ್ -ಆರೋಗ್ಯ ಇಲಾಖೆ ಪ್ಲಾನ್

Spread the love

ಬೆಂಗಳೂರು, : ಕೊವಿಡ್ (Coronavirus) ಬಳಿಕ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟ ಅಂತಾ ಕೆಲವರು ಅಡ್ಡ ಹಾದಿ ಹಿಡಿದಿದ್ರೆ ಇನ್ನೂ ಹಲವರು ಅನಾರೋಗ್ಯವನ್ನೆ ದಾಳ ಮಾಡಿಕೊಂಡು ಎಂಬಿಬಿಎಸ್ (MBBS) ಪದವಿ ಪಡೆಯದೆ ತರಬೇತಿ ಇಲ್ಲದೆ ಕ್ಲಿನಿಕ್ ಹಾಗೂ ಮೆಡಿಕಲ್ ಕ್ಲಿನಿಕ್ ಓಪನ್ ಮಾಡಿ ಜನರ ಜೀವದ ಜೊತೆ ಚೆಲ್ಲಾಟಕ್ಕೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಕೊವಿಡ್ ಬಳಿಕ ನಕಲಿ ವೈದ್ಯರ ಹಾಗೂ ಭ್ರೂಣಲಿಂಗ ಪತ್ತೆ ಜಾಲಗಳ ಹಾವಳಿ ಹೆಚ್ಚಾಗಿದ್ದು ಆರೋಗ್ಯ ಇಲಾಖೆ (Health Department) ಸಂತ್ರಸ್ತರ ರೂಪದಲ್ಲಿ ಗುಪ್ತ ಕಾರ್ಯಾಚರಣೆಯ ಡಿಕಾಯ್​ ತಂತ್ರ ಪ್ರಯೋಗಿಸಲು ಮುಂದಾಗಿದೆ.

ರಾಜ್ಯದಲ್ಲಿನ ಕಳ್ಳ ವೈದ್ಯರು ಹಾಗೂ ಕ್ಲಿನಿಕ್​ಗಳ ವಿರುದ್ಧ ಆರೋಗ್ಯ ಇಲಾಖೆ ಡಿಕಾಯ್ ಆಪರೇಶನ್ ಪ್ಲಾನ್ ರೂಪಿಸಲು ಮುಂದಾಗಿದೆ. ಡಿಕಾಯ್ ಆಪರೇಶನ್ ಅಂದ್ರೆ ಸಂತ್ರಸ್ತರ ರೂಪದಲ್ಲಿ ಗುಪ್ತ ಕಾರ್ಯಾಚರಣೆ ಅಂತಾ ಈಗಾಗಲೇ ತಮಿಳುನಾಡಿನಲ್ಲಿ ಆರೋಗ್ಯ ಇಲಾಖೆ ಈ ತಂತ್ರ ಪ್ರಯೋಗಿಸಿದ್ದು ಸಕ್ಸಸ್ ಕಂಡಿದೆ. ಹೀಗಾಗಿ ಇದೇ ಮಾಡಲ್ ನಮ್ಮ ರಾಜ್ಯದಲ್ಲಿಯೂ ರೂಪಿಸಲು ಇಲಾಖೆ ಮುಂದಾಗಿದೆ. ಕೊರೊನಾ ಬಳಿಕ ಮೊಬೈಲ್ ಕ್ಲಿನಿಕ್ ಗಳ ಮೂಲಕ ಜನರ ಜೀವಕ್ಕೆ ಕುತ್ತು ತರ್ತಿರೋ ನಕಲಿ ವೈದ್ಯರು ಹಾಗೂ ಭ್ರೂಣಹತ್ಯ ವಿರುದ್ಧ ಆರೋಗ್ಯ ಇಲಾಖೆಯ ಈ ಮೂಲಕ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

ಈಗಾಗಲೇ ತಮಿಳನಾಡಿಗೆ ರಾಜ್ಯ ಆರೋಗ್ಯ ಇಲಾಖೆ ಭೇಟಿ ನೀಡಿ ಅಧ್ಯಯನ ಮಾಡಿ ರಾಜ್ಯ ಸರ್ಕಾರಕ್ಕೆ ಈ ಬರದಿ ನೀಡಿದೆ. ಡಿಕಾಯ್ ಅಪರೇಶನ್ ನಲ್ಲಿ ಇಲಾಖೆ ಸಿಬ್ಬಂದಿಗಳು ಕಾರ್ಯಪಡೆ ನಿರಂತರವಾಗಿ ವಿಡಿಯೋ ಸ್ಟಿಂಗ್ ಮೂಲಕ ಸಮಗ್ರ ದಾಖಲೆ ಪಡೆದು ಸಂಪೂರ್ಣ ದಾಖಲೆ ಸಮೇತ್ ರೇಡ್ ಮಾಡಿ ಸೀಜ್ ಮಾಡುವುದರ ಜೊತೆಗೆ ಪೊಲೀಸಿಂಗ್ ಕೂಡಾ ಇರಲಿದ್ದು ಅನುಮಾನ ಬಂದ್ರೂ ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುವ ಕಾರ್ಯತಂತ್ರ ಇದಾಗಿದೆ.

ಸದ್ಯ ಈ ಬಗ್ಗೆ ಆರೋಗ್ಯ ಇಲಾಖೆ ಐದು ಜನರ ತಂಡ ತಮಿಳುನಾಡಿಗೆ ಹೋಗಿ ಸಮಗ್ರ ಮಾಹಿತಿ ಪಡೆದು ಇದೇ ಮಾದರಿಯ ಡಿಕಾಯ್ ಕಾರ್ಯತಂತ್ರವನ್ನ ರಾಜ್ಯದಲ್ಲಿ ಪ್ರಯೋಗಿಸಲು ಮುಂದಾಗಿದೆ. ಈ ಮೂಲಕ ಕಳ್ಳ ವೈದ್ಯರು ಹಾಗೂ ಭ್ರೂಣಲಿಂಗ ಪತ್ತೆ ಮಾಡುವ ಮಾಫಿಯಾಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮುಂದಾಗಿದೆ.


Spread the love

About Laxminews 24x7

Check Also

ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ: ಅಧ್ಯಕ್ಷ ರವಿಕುಮಾರ್‌ ಕೊನೆಗೂ ರಾಜೀನಾಮೆ

Spread the loveಬೆಂಗಳೂರು, (ಸೆಪ್ಟೆಂಬರ್ 05): ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ (Bhovi Development Corporation) ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ