Breaking News

ವಿಮೆ ಕಂಪನಿಗಳು ಎಸ್ಕೇಪ್, ಏಜೆಂಟ್‌ಗಳು ಕಂಗಾಲು: ನೂರಾರು ಕೋಟಿ ವಿಮೆ ಮಾಡಿಸಿದ ಬಡ ಜನರು ಕಣ್ಣೀರು

Spread the love

ದಗ ಜಿಲ್ಲೆಯಲ್ಲಿಯೇ 150 ಕೋಟಿಗೂ ಹೆಚ್ಚು ವಿಮೆ ಮಾಡಲಾಗಿದೆಯಂತೆ. ಬಡ ಜನ್ರು, ರೈತರು, ವ್ಯಾಪಾರಸ್ಥರು ಪಾಲಿಸಿ ಮಾಡಿಸಿದ್ದಾರೆ. ಅತ್ತ ಪಿಎಸಿಎಲ್, ಸಹನಾ, ಗರಿಮಾ, ಅಗ್ರೀಗೊಲ್ಡ್, ಸಾಯಿ ಪ್ರಸಾದ್ ಗ್ರೂಪ್ ಸಾಯಿ, ಸಮೃದ್ಧ ಜೀವನ, ಕಲ್ಪತರು, ಸಂಜೀವಿನಿ, ನವಜೀವನ, ಸೇರಿದಂತೆ 30 ಕ್ಕೂ ಹೆಚ್ಚು ಕಂಪನಿಗಳು ಬಾಗಿಲು ಹಾಕಿಕೊಂಡು ನಾಪತ್ತೆಯಾಗಿವೆ.

ಅವರೆಲ್ಲರೂ ವಿಮೆ ಮಾಡಿಸಿದ ಏಜೆಂಟ್‌ಗಳು. ಹಣದಾಸೆಗೆ ಅಮಾಯಕ ಜನ್ರಿಗೆ ಸ್ವರ್ಗಕ್ಕೆ ಏಣಿ ತೋರಿಸಿ ಕೋಟ್ಯಾಂತರ ರೂಪಾಯಿ ವಿಮೆ ಮಾಡಿಸಿಬಿಟ್ಟಿದ್ದಾರೆ‌. ಆದರೆ ವಿಮೆ ಮಾಡಿಸಿದ ಬಡ ಜನ್ರು ತಮ್ಮ ಮಕ್ಕಳ ಮದುವೆ, ಶಿಕ್ಷಣ, ಮನೆ ನಿರ್ಮಾಣ ಕನಸು ಕಂಡು ದುಡಿದ ಹಣವೆಲ್ಲಾ ಹೂಡಿಕೆ ಮಾಡಿ ಈಗ ಕಣ್ಣೀರು ಹಾಕ್ತಾಯಿದ್ದಾರೆ. ಆದ್ರೆ, ವಿಮೆ ತುಂಬಿಸಿಕೊಂಡ ಕಂಪನಿಗಳು ಜನ್ರಿಗೆ ಮೋಸ ಮಾಡಿ ನಾಪತ್ತೆಯಾಗಿವೆ. ವಿಮೆ ತುಂಬಿದ ಜನ್ರು ನಮ್ಮ ಹಣ ವಾಪಸ್ ನೀಡುವಂತೆ ದುಂಬಾಲು ಬಿದ್ದಿವೆ. ಆ ಕಡೆಗೆ ಕಂಪನಿಯವರೂ ಇಲ್ಲಾ, ಈ ಕಡೆಗೆ ಜನ್ರು ಹಣ ನೀಡುವಂತೆ ಒತ್ತಡ ಹಾಕ್ತಾಯಿದ್ದಾರೆ. ಹೀಗಾಗಿ ಮಧ್ಯೆ ಸಿಲುಕಿದ ಏಜೆಂಟರು ಕಂಗಾಲಾಗಿದ್ದು, ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕೆಂದು ಬೇಡುತ್ತಿದ್ದಾರೆ.

ಸರ್ ನಾನು ಜನ್ರಿಂದ 40 ಲಕ್ಷ ಹಣ ಹೂಡಿಕೆ ಮಾಡ್ಸಿನಿ. ನಾನೂ 50 ಲಕ್ಷ ಮಾಡ್ಸಿನಿ ಸರ್. ಹೀಗೆ ಒಬ್ಬರಿಗಿಂತ ಒಬ್ಬರು ಕಣ್ಣೀರು ಹಾಕ್ತಾಯಿದ್ದಾರೆ. ಮತ್ತೊಂದೆಡೆ ಜನ್ರನ್ನು ನಂಬಿಸಿ ಹಣ ಹೂಡಿಕೆ ಮಾಡಿಸಿದ ಏಜಂಟರೂ ಗೋಳಾಡುತ್ತಿದ್ದಾರೆ. ವಿಶೇಷ ಚೇತನ ಮಹಿಳೆಯರು ಸೇರಿದಂತೆ ನೂರಾರು ಜನ್ರು ಗದಗ ನಗರದ ಭೀಷ್ಮ ಕರೆಯ ಬಳಿ ಜಮಾಯಿಸಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

ಹೌದು ಪಿಎಸಿಎಲ್, ಸಹನಾ, ಗರಿಮಾ, ಅಗ್ರೀಗೊಲ್ಡ್, ಸಾಯಿ ಪ್ರಸಾದ್ ಗ್ರೂಪ್ ಸಾಯಿ, ಸಮೃದ್ಧ ಜೀವನ, ಕಲ್ಪತರು, ಸಂಜೀವಿನಿ, ನವಜೀವನ, ಸೇರಿದಂತೆ 30 ಕ್ಕೂ ಹೆಚ್ಚು ಕಂಪನಿಗಳು ಬಾಗಿಲು ಹಾಕಿಕೊಂಡು ನಾಪತ್ತೆಯಾಗಿವೆ. ಗದಗ ಜಿಲ್ಲೆಯ ಸಾವಿರಾರು ಏಜೆಂಟಗಳು ಕಮೀಷನ್ ಹಣಕ್ಕಾಗಿ ಕೋಟ್ಯಾಂತರ ಮೊತ್ತದ ಪಾಲಿಸಿ ಮಾಡಿಸಿದ್ದಾರೆ. ಆದ್ರೆ, ಹಲವು ವರ್ಷಗಳ ಹಿಂದೆ ಪಾಲಿಸಿ ಮಾಡಿಸಿದ್ದ ಫಲಾನುಭವಿಗಳು ಈಗ ಹಣ ನೀಡುವಂತೆ ಮೇಲೆ ಒತ್ತಡ ಹಾಕ್ತಾಯಿದ್ದಾರೆ. ನಿತ್ಯ ಮನೆಗೆ ಬಂದು, ಹಣ ನೀಡಿ ಇಲ್ಲವಾದರೆ ನಿಮ್ಮ ಜಮೀನು, ಮನೆ ಮಾರಾಟ ಮಾಡಿ ನಮಗೆ ಹಣ ನೀಡಿ ಎಂದು ಏಜೆಂಟರ ಒತ್ತಡ ಹಾಕುತ್ತಿದ್ದಾರಂತೆ. ಹೀಗಾಗಿ ನಮಗೆ ನ್ಯಾಯ ಕೊಡಿಸಿ ಎಂದು ಏಜೆಂಟರು ಗೋಳಾಡುತ್ತಿದ್ದಾರೆ.

ಗದಗ ಜಿಲ್ಲೆಯಲ್ಲಿಯೇ 100 ಕೋಟಿಯಿಂದ 150 ಕೋಟಿಗೂ ಹೆಚ್ಚು ವಿಮೆ ಮಾಡಲಾಗಿದೆಯಂತೆ. ಬಡ ಜನ್ರು, ರೈತರು, ವ್ಯಾಪಾರಸ್ಥರು, ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದ ಜನ್ರು ಪಾಲಿಸಿ ಮಾಡಿಸಿದ್ದಾರೆ. ಒಂದೊಂದು ರೂಪಾಯಿ ಕೂಡಿಟ್ಟು, ಲಕ್ಷಾಂತರ ರೂಪಾಯಿ ಮೌಲ್ಯದ ಪಾಲಿಸಿಯನ್ನು ಇದೇ ಏಜೆಂಟರ ಮೂಲಕ ಮಾಡಿಸಿದ್ದಾರೆ. ಆದ್ರೆ ಈವಾಗ ಏಜೆಂಟ‌ಗಳ ಕೈಗೆ ವಿಮೆ ಕಂಪನಿಗಳು ಸಿಗ್ತಾಯಿಲ್ಲ. ಸ್ಥಳೀಯ ಏಜೆಂಟ್ ಮಾತನ್ನು ನಂಬಿ ಪಾಲಿಸಿ ಮಾಡಿಸಿರುವ ಸಂತ್ರಸ್ತರು ನಮಗೆ ಹಣ ನೀಡಿ ಎಂದು ಏಜೆಂಟರ ಬೆನ್ನು ಬಿದ್ದಿದ್ದಾರೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ