Breaking News

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವಿಚಾರ: ಅನುಮತಿ ಪಡೆದು ಕಟೌಟ್ ಹಾಕಿದ್ದರೂ FIR ದಾಖಲು

Spread the love

ಬೆಂಗಳೂರು, : ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಅನುಮತಿ ಪಡೆದು ಕಟೌಟ್ ಹಾಕಿದ್ದರೂ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್(FIR)ದಾಖಲು ಮಾಡಲಾಗಿದೆ. ಶಿವನಗರ ಯುವಕರ ಸಂಘದಿಂದ ಬೆಸ್ಕಾಂಗೆ ಹಣ ಪಾವತಿಸಿ, ಅನುಮತಿ ಪಡೆದು ಕಾರ್ಡ್‌ ರಸ್ತೆಯ ವಾರಿಯರ್ ಬೇಕರಿ ಬಳಿ ಬೃಹತ್ ಕಟೌಟ್ ಅಳವಡಿಸಲಾಗಿದೆ. ರಾಜಾಜಿನಗರ ಪೊಲೀಸರ ನಡೆಗೆ ಶಿವನಗರ ಯುವಕರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ ರಾಮಜಪ ನಡೆಯುತ್ತಿದೆ. ಇದರ ನಡುವೆ ಕೋಲಾರದಲ್ಲಿ ಕಿಡಿಗೇಡಿಗಳು ಶ್ರೀರಾಮನ ಫ್ಲೆಕ್ಸ್‌ ಹರಿದು ಶಾಂತಿ ಕದಡುವ ಪ್ರಯತ್ನ ಮಾಡಿದ್ದರು. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲೂ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಸಂಕ್ರಾಂತಿ ಸಂಬಂಧ ಶುಭ ಕೋರಿ ಫ್ಲೆೇಕ್ಸ್ ಅಳವಡಿಸಲಾಗಿತ್ತು.

 

ರಾತ್ರಿ 10:40 ರ ಸುಮಾರಿಗೆ ಬಂದ ದುಷ್ಕರ್ಮಿ, ಕೈಯಲ್ಲಿದ್ದ ಚಾಕುವಿನಿಂದ ಫ್ಲೆಕ್ಸ್‌ ಹರಿದಿದ್ದಾನೆ. ಮುಂದೆ ಹೋದವನು ಮತ್ತೆ ವಾಪಸ್ ಆಗಿ ಇನ್ನೊಮ್ಮೆ ಚಾಕು ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದ. ಇನ್ನೊಂದು ಸ್ಪಾಟ್‌ನಲ್ಲೂ ಇದೇ ರೀತಿ ಪ್ಲೆಕ್ಸ್‌ ಹರಿದು ಹಾಕಲಾಗಿತ್ತು. ವಿಠಲೇಶ್ವರಪಾಳ್ಯ ಮತ್ತು ಗುನುಗುಂಟೆಪಾಳ್ಯದಲ್ಲಿ ಹಾಕಲಾಗಿದ್ದ ಫ್ಲೆಕ್ಸ್​ಗಳನ್ನು ಹರಿದಿದ್ದಾರೆ.

ಬೆಳಗ್ಗೆ ವಿಷ್ಯ ಗೊತ್ತಾಗುತ್ತಿದ್ದಂತೆ ಬಿಜೆಪಿ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ಸ್ಥಳಕ್ಕಾಗಿಮಿಸಿದ ಸಂಸದ ಮುನಿಸ್ವಾಮಿ ಪ್ರತಿಭಟನೆ ಆರಂಭಿಸಿದ್ದರು. ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು. ಈ ವೇಳೆ ಜೆಡಿಎಸ್‌ ಶಾಸಕ ಸಮೃದ್ಧಿ ಮಂಜುನಾಥ್‌ ಸ್ಪಾಟ್‌ಗೆ ಬರ್ತಿದ್ದಂತೆ ಇಬ್ಬರ ನಡುವೆ ಮಾತಿನಚಕಮಕಿ ಉಂಟಾಗಿತ್ತು.

 

ಬಿಜೆಪಿ ಹೋರಾಟ ಜೋರಾಗುತ್ತಿದ್ದಂತೆ ಜಾಹೀರ್‌ ಹಾಗೂ ಮತ್ತೊಬ್ಬ ಆರೋಪಿಯನ್ನ ಅರೆಸ್ಟ್‌ ಮಾಡಲಾಗಿದೆ. ಹರಿದಿದ್ದ ಫ್ಲೆಕ್ಸ್‌ ತೆರವುಗೊಳಿಸಿ ಹೊಸ ಫ್ಲೆಕ್ಸ್ ಅಳವಡಿಸಲಾಗಿದೆ. ಹೊಸ ಫ್ಲೆಕ್ಸ್ ಹಾಕ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸಂಭ್ರಮದ ಹೊತ್ತಲ್ಲೇ ಕೆಲ ಕಿಡಿಗೇಡಿಗಳು ದುಷ್ಕೃತ್ಯ ಎಸಗಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಸದ್ಯ ಮುಳಬಾಗಿಲು ಬೂದಿಮುಚ್ಚಿದ ಕೆಂಡದಂತಿದ್ದು ಪೊಲೀಸರು ನಿಗಾವಹಿಸಿದ್ದಾರೆ.


Spread the love

About Laxminews 24x7

Check Also

ಮಹಿಷ ದಸರಾ | ಯಾರಿಗೂ ತೊಂದರೆ ಆಗದಂತೆ ಮಾಡಿಕೊಳ್ಳಬಹುದು: ಮಹದೇವಪ್ಪ

Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ