ಹುಬ್ಬಳ್ಳಿ, ಜನವರಿ 17: ಕುರಿಗಾಹಿ ಮೇಲೆ ಅರಣ್ಯ ಇಲಾಖೆ (Forest Department) ಸಿಬ್ಬಂದಿಗಳು ದರ್ಪ ತೋರಿಸಿದ್ದಾರೆ. ಧಾರವಾಡ (Dharwad) ಜಿಲ್ಲೆಯ ಕಲಘಟಗಿ (Kalagatagi) ತಾಲೂಕಿನ ಸೂಳಿಕಟ್ಟಿ ಅರಣ್ಯ ವೃತ್ತದಲ್ಲಿ ಕುರಿ ಮೇಯಿಸುತ್ತಿದ್ದಕುರಿಗಾಹಿಬೀರಪ್ಪನ ಬಳಿ ಸೂಳಿಕಟ್ಟಿ ಫಾರೆಸ್ಟ್ ಗಾರ್ಡ್ ಆನಂದ ಹಾಗೂ ಇಲಾಖೆಯ ಮತ್ತೋರ್ವ ಸಿಬ್ಬಂದಿ ಲಂಚ ಕೇಳಿದ್ದಾರೆ. ಹಣ ಇಲ್ಲವೆ, ಕುರಿ ಕೊಡುವಂತೆ ಫಾರೆಸ್ಟ್ ಗಾರ್ಡ್ ಆನಂದ ಒತ್ತಾಯಿಸಿದ್ದಾನೆ.
ಮಾಮೂಲಿ ಕೊಡದೆ ಅರಣ್ಯದಲ್ಲಿ ಕುರಿ ಮೇಯಿಸಿದರೇ ಒದ್ದು ಬಿಡುತ್ತೇನೆ. ಗೌಳಿಗರು ಅರಣ್ಯ ಅಧಿಕಾರಿಗಳಿಗೆ ಕೋಳಿ, ಹುಂಜ, ಹಣ ಕೊಡುತ್ತಾರೆ. ಕುರುಬರು ಹಣ ಕೊಡಬೇಕು, ಇಲ್ದಿದಿದ್ದರೇ ಕೇಸ್ ಹಾಕಿ ಜೈಲಿಗೆ ಕಳಿಸುತ್ತೇವೆ ಅಂತಾ ಅವಾಜ್ ಹಾಕಿದ್ದಾರೆ. ಆನಂದ ಹಾಗೂ ಸಹಚರನ ವರ್ತನೆ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Laxmi News 24×7