ಇಲ್ಲಿನ ಬಹುತೇಕರಿಗೆ ಈಜು ಹುಟ್ಟುತ್ತಾನೆ ಬಂದಿರುತ್ತೆ. ಆದ್ರೆ ಇಲ್ಲೊಬ್ಬ ಬಾಲಕ ಈಜನ್ನು ಶಾಲೆಯಲ್ಲಿ ಕಲಿತು ಕೇವಲ ಈಜೋದು ಮಾತ್ರವಲ್ಲದೇ ನೀರಿನಲ್ಲಿ ತೇಲುವ ವಿದ್ಯೆಯನ್ನೂ ಕರಗತ ಮಾಡಿಕೊಂಡಿದ್ದಾನೆ. ಅಷ್ಟೆ ಅಲ್ಲ. ಬರೋಬ್ಬರಿ ಎರಡೂವರೆ ಗಂಟೆ ನೀರಿನಲ್ಲಿ ತೇಲೊ ಮೂಲಕ ನೊಬೆಲ್ ಬುಕ್ ಆಫ್ ರೆಕಾರ್ಡ್ ಗೆ ಎಂಟ್ರಿ ಕೊಟ್ಟಿದ್ದಾನೆ. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ. ಹೀಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ತೇಲುವ ವಿದ್ಯಾರ್ಥಿಯ ಹೆಸರು ಶಫಿನ್ ಮುಸ್ತಾಫಾ. ಮಂಗಳೂರಿನ ಜೆಪ್ಪಿನಮೊಗರು ಬಳಿಯ ಪ್ರೆಸ್ಟೀಜ್ ಇಂಟರ್ನಾಶನಲ್ ಶಾಲೆ ವಿದ್ಯಾರ್ಥಿ. 8ನೇ ತರಗತಿ ಓದುತ್ತಿರೋ ಈತ ಈಜುವುದಲ್ಲಿ ಎಕ್ಸಪರ್ಟ್. ಕೇವಲ ಈಜೋದು ಮಾತ್ರವಲ್ಲ, ನೀರಿನ ಮೇಲೆ ಕೈಕಾಲು ಆಡಿಸದೆ ತೇಲಬಲ್ಲ ಚತುರ ಈತ.
ಮಂಗಳೂರಿನ ಶಫಿನ್ ಮುಸ್ತಫಾ 2 ಗಂಟೆ 30 ನಿಮಿಷ 13 ಸೆಕೆಂಡುಗಳ ಕಾಲ ನೀರಿನ ಮೇಲೆ ತೇಲುವ ಮೂಲಕ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಎಂಟ್ರಿ ಕೊಟ್ಟಿದ್ದಾನೆ. ಮುಂಜಾನೆ 5.30 ರಿಂದ ತೇಲಲು ಆರಂಭಿಸಿದ 14 ವರ್ಷದ ಈ ವಿದ್ಯಾರ್ಥಿ ಈ ದಾಖಲೆಯನ್ನು ನಿರ್ಮಿಸಿದ್ದಾನೆ. ಶಫಿನ್ ಆರೋಮಲ್ ಎಂಬುವವರಿಗೆ ಈ ತರಬೇತಿ ಪಡೆದಿದ್ದಾನೆ. ಸಾಧನೆ ಮಾಡಲು ಬೆಂಬಲ ಮತ್ತು ಮಾರ್ಗದರ್ಶನ ನೀಡಿದ ಶಿಕ್ಷಕರು ಮತ್ತು ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಶಾಲೆಯ ಆಡಳಿತ ಮಂಡಳಿಗೆ ಶಫೀನ್ ಧನ್ಯವಾದ ಹೇಳಿದ್ದಾನೆ.