Breaking News

ಶ್ರೀರಾಮನ ಕಟೌಟ್, ಪ್ಲೆಕ್ಸ್​​ನ್ನು ಬ್ಲೇಡ್​​ನಿಂದ ಹರಿದ ದುಷ್ಕರ್ಮಿಗಳು

Spread the love

ಜನವರಿ 17: ಶ್ರೀರಾಮನ (Sri ram) ಕಟೌಟ್ ಹಾಗೂ ಪ್ಲೆಕ್ಸ್​ ಅನ್ನು ದುಷ್ಕರ್ಮಿಗಳು ಬ್ಲೇಡ್​​ನಿಂದ ಹರಿದಿರುವ ಘಟನೆ ಮುಳಬಾಗಿಲು (Mulabagilu) ನಗರದ ಗುಣಗಂಟೆಪಾಳ್ಯದಲ್ಲಿ ನಡೆದಿದೆ. ಜನವರಿ 22 ರಂದುಅಯೋಧ್ಯೆ(Ayodhya) ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಲವಕುಶ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​​ ಮತ್ತು ಪುತ್ರ ಅಯೋಧ್ಯೆ ಧ್ರುವ ಚಾರಿಟಬಲ್​​ ಟ್ರಸ್ಟ್​​ ವತಿಯಿಂದ ನಗರದಲ್ಲಿ ರಾಮನ ಶೋಭಾಯಾತ್ರೆ, ಸೀತರಾಮ ಕಲ್ಯಾಣೋತ್ಸವ ಮತ್ತು ಮಹಾಸಾಮ್ರಾಜ್ಯ ಪಟ್ಟಾಭಿಷೇಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿನಾಂಕ 21 ಮತ್ತು 22 ರಂದು ಎರಡು ದಿನ ಈ ಕಾರ್ಯಕ್ರಮಗಳು ನಡೆಯಲಿದ್ದವು.

 

ಹೀಗಾಗಿ ನಗರದಲ್ಲಿ ಬ್ಯಾನರ್​ ಮತ್ತು ಶ್ರೀರಾಮ ಕಟೌಟ್​ ನಿಲ್ಲಿಸಲಾಗಿತ್ತು. ಈ ಬ್ಯಾನರ್​ ಮತ್ತು ಕಟ್​ಔಟ್​​ಗಳನ್ನು ನಿನ್ನೆ (ಜ.16)ರ ರಾತ್ರಿ 10.44ರ ಸುಮಾರಿಗೆ ಯಾರೋ ದುಷ್ಕರ್ಮಿಗಳು ಬ್ಲೇಡ್​ನಿಂದ ಹರಿದು ಹಾಕಿದ್ದಾರೆ. ಶ್ರೀರಾಮನ ಕಟೌಟ್​ನ್ನು ಹರಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಮುಳಬಾಗಿಲು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಪೊಲೀಸರು ಸ್ಥಳದಲ್ಲಿರುವ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಪರೀಶೀಲನೆ ನಡೆಸುತ್ತಿದ್ದಾರೆ. ಸಂಸದ ಮುನಿಸ್ವಾಮಿ ಸೇರಿದಂತೆ ಹಲವು ಮುಖಂಡರು ಮುಳಬಾಗಿಲಿನತ್ತ ದೌಡಾಯಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಆದೇಶ ನೀಡಿದೆ.

Spread the loveಬೆಂಗಳೂರು: 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ