ಶಸ್ತ್ರಚಿಕಿತ್ಸಾ ವಿಧಾನ, ಬಲೂನ್ ಮಿಟ್ರಲ್ ವಾಲ್ವುಲೋಪ್ಲ್ಯಾಸ್ಟಿಯಲ್ಲಿ ಅವರ ಸೇವೆಗಾಗಿ ವೈದ್ಯಕೀಯ ವಲಯದಲ್ಲಿ ಅವರಿಗೆ ಅಪಾರ ಗೌರವವಿದೆ. ತಮ್ಮ ಗಣನೀಯ ಸೇವೆಗಾಗಿ 2007 ರಲ್ಲಿ ಪದ್ಮಶ್ರೀ ಪಡೆದರು. ರಾಜಕೀಯವಾಗಿ ಹೇಳುವುದಾದರೆ, ಅವರು ಶ್ರವಣಬೆಳಗೊಳ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಸಹೋದರ. ಮಂಜುನಾಥ್ ಅವರ ಪತ್ನಿ ಅನಸೂಯಾ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಹಿರಿಯ ಪುತ್ರಿ.
ಡಾ.ಸಿ.ಎನ್.ಮಂಜುನಾಥ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಸನ ಅಥವಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ?
ಬೆಂಗಳೂರು: ಎರಡು ದಶಕಗಳಿಂದ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಸಿ.ಎನ್.ಮಂಜುನಾಥ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಸನ ಅಥವಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಡಾ ಚೋಳೇನಹಳ್ಳಿ ನಂಜಪ್ಪ ಮಂಜುನಾಥ್ (66) ಅವರು ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜನವರಿ 31ಕ್ಕೆ ಅವರ ಅಧಿಕಾರವಧಿ ಅಂತ್ಯವಾಗಲಿದೆ. ಮಂಜುನಾಥ್ ಅವರ ನಿರ್ದೇಶಕ ಸ್ಥಾನದ ಅವಧಿಯನ್ನು ಹಿಂದಿನ ಬಿಜೆಪಿ ಸರ್ಕಾರ 1 ವರ್ಷಗಳ ಕಾಲ ಮುಂದುವರಿಸಿತ್ತು. ಮತ್ತೆ ಅವರನ್ನು ಮುಂದಿನ 6 ತಿಂಗಳುಗಳ ಕಾಲ ಸೇವಾವಧಿಯನ್ನು ಕಾಂಗ್ರೆಸ್ ಸರ್ಕಾರ ವಿಸ್ತರಿಸಿತ್ತು.