ಬೆಳಗಾವಿ, ಜನವರಿ : ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಗಿಪ್ಟ್ ಪಾಲಿಟಿಕ್ಸ್(Gift Politics) ಜೋರಾಗಿಯೇ ಸದ್ದು ಮಾಡಿತ್ತು. 2023 ವರ್ಷದ ಆರಂಭದಲ್ಲೇ ಬೆಳಗಾವಿ (Belagavi) ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಮತದಾರರಿಗೆ ಗಿಫ್ಟ್ಗಳನ್ನು ನೀಡಿ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಆರಂಭಿಸಿದ್ದರು. ಇದೀಗ ಲೋಕಸಭೆ ಚುನಾವಣೆ ಹತ್ತಿರದಲ್ಲಿದ್ದು, ಈ ಬಾರಿಯೂ ಗಿಪ್ಟ್ ಪಾಲಿಟಿಕ್ಸ್ ಬೆಳಗಾವಿಯಿಂದಲೇ ಆರಂಭವಾಗಿದೆ. ಹೌದು ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಸಂಜಯ ಪಾಟೀಲ್ ಹೆಲ್ಮೆಟ್ ವಿತರಿಸುತ್ತಿದ್ದಾರೆ.
ಆಕಾಂಕ್ಷಿ ಸಂಜಯ ಪಾಟೀಲ್ ಭಾವಚಿತ್ರ ಮತ್ತು ಕಮಲದ ಗುರುತಿರುವ ಹೆಲ್ಮೆಟ್ ಅನ್ನು ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಪದಾಧಿಕಾರಿಗಳಿಗೆ ಪದಾಧಿಕಾರಿಗಳಿಗೆ ವಿತರಿಸುತ್ತಿದ್ದಾರೆ. ಸಂಜಯ ಪಾಟೀಲ್ ಕಳೆದ ವರ್ಷವೂ ಕ್ಷೇತ್ರದ ಮತದಾರರಿಗೆ ಗಿಪ್ಟ್ ವಿತರಿಸಿದ್ದರು. ಆದರೆ ಸಂಜಯ ಪಾಟೀಲ್ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು.