ಉದ್ಯೋಗ (Job) ಹುಡುಕಲು ಬೈಕ್‌ನಲ್ಲಿ ಹೋಗುವ ಯುವಕರಿಗೆ ಪೆಟ್ರೋಲ್‌ಗೆ 100 ರೂ, ಕಾಫಿಗೆ 50 ರೂ. ಬೇಕಾಗುತ್ತದೆ. ಇದಕ್ಕೆಲ್ಲಾ ಯುವ ನಿಧಿ ಹಣ ಉಪಯೋಗಕ್ಕೆ ಬರುತ್ತದೆ ಎಂದು ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ (Mohammed Nalapad) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರುದ್ಯೋಗ ಡಿಪ್ಲೋಮಾ ಹಾಗೂ ಪದವೀಧರರಿಗೆ ಉದ್ಯೋಗಭತ್ಯೆ ನೀಡುವ ಯುವ ನಿಧಿ ಯೋಜನೆಗೆ (Yuva Nidhi Scheme) ಇಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಾಗಿದೆ.
ಡಿಪ್ಲೋಮಾ ಆದ ನಿರುದ್ಯೋಗಿ ಯುವಕರಿಗೆ 1500 ಹಾಗೂ ಪದವೀಧರರಿಗೆ 3000 ರೂ. ನೀಡುವ ಯೋಜನೆ ಇದಾಗಿದೆ. ಇದರಿಂದಾಗಿ ಯುವಕರಿಗೆ ನಾನಾ ರೀತಿಯ ಸಹಾಯವಾಗುತ್ತದೆ ಎಂದು ಹೇಳಿದರು.
ಒಂದು ಉದ್ಯೋಗ ಹುಡಕಬೇಕಾದರೆ ಯುವಕರು ಬೈಕ್ ಮೂಲಕ ಹೋಗುವಾಗ ಬೈಕ್ಗೆ ಪೆಟ್ರೋಲ್ ಹಾಕಲು 100 ರೂಪಾಯಿ ಬೇಕು, ಹಾಗೇ 50 ರೂಪಾಯಿ ಕಾಫಿಗೆ ಬೇಕಾಗುತ್ತದೆ. ಇದಕ್ಕೂ ಯುವ ನಿಧಿ ಹಣ ಉಪಯೋಗ ಬರುತ್ತದೆ. ಇದರಿಂದಾಗಿ ಮನೆಯಲ್ಲಿ ಹಣ ಕೇಳುವ ಅವಶ್ಯಕತೆ ಇರುವುದಿಲ್ಲ ಎಂದರು.