ಬೆಂಗಳೂರು: ಭಾರತೀಯ ಯುವ ಕಾಂಗ್ರೆಸ್ ನ (India Youth Congress) ರಾಷ್ಟ್ರೀಯ ಮಾಧ್ಯಮ ಸಂಯೋಜಕರಾಗಿ (national media coordinator) ವಿ.ಎಸ್. ಅಭಿಷೇಕ್ (v.s. abhishek) ಅವರನ್ನು ನೇಮಿಸಲಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಉಸ್ತುವಾರಿ ಮಾಧ್ಯಮ ವಿಭಾಗದ ವರುಣ್ ಪಾಂಡೆ (varun pande), ಭಾರತೀಯ ಯುವ ಕಾಂಗ್ರೆಸ್ ವಿ.ಎಸ್. ಅಭಿಷೇಕ್ ಅವರನ್ನು ರಾಷ್ಟ್ರೀಯ ಮಾಧ್ಯಮ ಸಂಯೋಜಕರಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಯುವ ಕಾಂಗ್ರೆಸ್ ಮುಂದೆ ಸಾಕಷ್ಟು ಗಂಭೀರ ಸವಾಲುಗಳಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಬೆನ್ನಲುಬಾಗಿರಬೇಕು ಎಂದು ಹೇಳಿದ್ದಾರೆ.
ವಿ.ಎಸ್. ಅಭಿಷೇಕ್ ಅವರು ಭಾರತೀಯ ಯುವ ಕಾಂಗ್ರೆಸ್ ನ ಉಸ್ತುವಾರಿ ಶ್ರೀ ಕೃಷ್ಣ ಅಲ್ಲವರು, ಭಾರತೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀನಿವಾಸ್ ಬಿ.ವಿ. ಹಾಗೂ ಎಲ್ಲ ಭಾರತೀಯರ ಹೃದಯ ಮತ್ತು ಮನಸ್ಸಿನಲ್ಲಿ ಏಕತೆ ಮತ್ತು ಶಾಂತಿಯ ಸಂದೇಶವನ್ನು ಹರಡಲು ಅತ್ಯುತ್ತಮ ಕೆಲಸ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.