Breaking News

ಬೆಳಗಾವಿ: ಸುರೇಬಾನ ಗ್ರಾಮದ ಹೊರ ವಲಯದ ಬೆಟ್ಟದಾರಣ್ಯದಲ್ಲೇ ಶಬರಿಗೆ ಶ್ರೀರಾಮನ ದರ್ಶನ

Spread the love

ಬೆಳಗಾವಿ, : ಅಯೋಧ್ಯೆ ಶ್ರೀರಾಮ ಮಂದಿರ (Ayodhya Ram Mandir) ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಈ ನಡುವೆ ದೇಶದಲ್ಲಿ ಇರುವ ಶ್ರೀರಾಮ, ಸೀತೆ, ಆಂಜನೇಯನಿಗೆಸಂಬಂಧಿಸಿದ ಅನೇಕ ಕುರುಹುಗಳು ಜಗಜ್ಜಾಹಿರವಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಇಂತಹ ಅನೇಕ ನಿರ್ದರ್ಶನಗಳು ಬೆಳಕಿಗೆ ಬಂದಿವೆ. ಇದೀಗ ಶ್ರೀರಾಮನ ದರ್ಶನಕ್ಕಾಗಿ ಜಾತಕ ಪಕ್ಷಿಯಂತೆ ಕಾದುಕುಳಿತಿದ್ದ ಶಬರಿಗೆ (Shabari) ರಾಮನು ದರ್ಶನ ಕೊಟ್ಟಿದ್ದು ಕೂಡ ಕರ್ನಾಟಕದಲ್ಲೇ ಎಂಬುದು ಹೆಮ್ಮೆಯ ಸಂಗತಿ. ಹಾಗಾದರೆ ಆ ಸ್ಥಳ ಯಾವುದು ಎಂಬುದು ಇಲ್ಲಿದೆ.

ಶ್ರೀರಾಮನಿಗಾಗಿ ಶಬರಿ ಕಾದುಕುಳಿತದ್ದು ಕರ್ನಾಟಕದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಹೊರ ವಲಯದ ಬೆಟ್ಟಗಳ ಮಧ್ಯದ ಅರಣ್ಯದಲ್ಲಿ ಮತ್ತು ಶ್ರೀರಾಮನು ಶಬರಿಗೆ ದರ್ಶನ ಕೂಡ ನೀಡಿದ್ದು ಇಲ್ಲೇ.

ರಾವಣನಿಂದ ಅಪಹರಿಸಲ್ಪಟ್ಟ ಪತ್ನಿ ಸೀತೆಯನ್ನ ಹುಡುಕಿಕೊಂಡು ಹೊರಟ ಶ್ರೀರಾಮ ಮತ್ತು ಸಹೋದರ ಲಕ್ಷ್ಮಣ, ಪರಮ ಭಕ್ತ ಆಂಜನೇಯನು ಸುರೇಬಾನ ಗ್ರಾಮದ ಹೊರ ವಲಯದ ಬೆಟ್ಟಗಳ ಮಧ್ಯದ ಅರಣ್ಯದಲ್ಲಿ ಸಾಗಿದ್ದಾರೆ. ಈ ವೇಳೆ ರಾಮಭಕ್ತೆ ಶಬರಿಗೆ ಶ್ರೀರಾಮನು ದರ್ಶನಕೊಟ್ಟು, ಮೋಕ್ಷ ದಯಪಾಲಿಸುತ್ತಾನೆ.

ದನಿದು ಬಂದ ಶ್ರೀರಾಮನಿಗೆ ಶಬರಿ ಭಕ್ತಿಯಿಂದ ಬೊರೆಹಣ್ಣನ್ನ ನೀಡಿದ್ದಳು. ಈ ಹಣ್ಣು ತಿಂದ ಶ್ರೀರಾಮನು ನೀರಿನ ದಾಹವಾಗುತ್ತದೆ. ಆಗ ರಾಮ ತನ್ನ ಬಿಲ್ಲಿನಿಂದ ಬಾಣ ಪ್ರಯೋಗಿಸಿ ಕಲ್ಲಿನ ಬಂಡೆಯಲ್ಲಿ ನೀರು ಚಿಮ್ಮಿಸುತ್ತಾನೆ. ಅಂದು ಶ್ರೀರಾಮ ಶಬರಿಗೆ ಹಣ್ಣು ತಿನ್ನಿಸಿದ ಬೊರೆಹಣ್ಣಿನ ಮರ ಇಂದಿಗೂ ಇದೆ.

ಅಷ್ಟೇ ಅಲ್ಲದೆ, ಮೂರು ಪುಷ್ಕರಣಿಗಳಲ್ಲಿ ಇಂದಿಗೂ ನೀರು ಬತ್ತಿಲ್ಲ. ರಾಮ ಕುಳಿತ ಜಾಗದಲ್ಲಿ ರಾಮಲಿಂಗೇಶ್ವರ ಮಂದಿರ ಕಟ್ಟಿ ಪೂಜೆ‌ ಮಾಡಲಾಗುತ್ತಿದೆ. ರಾಮನ ಆಶೀರ್ವಾದ ಪಡೆದ ಶಬರಿ ಭಕ್ತವತ್ಸಲೆಯಾಗಿ ನೆಲೆಸಿದ್ದಾಳೆ. ಈ ಜಾಗ ಶಬರಿ ಕೊಳ್ಳವೆಂದೇ ಸುಪ್ರಸಿದ್ಧಿ ಪಡೆದುಕೊಂಡಿದೆ.

ಶ್ರೀರಾಮ, ಲಕ್ಷ್ಮಣ, ಹನುಮಂತ, ಶಬರಿ ನಾಲ್ವರು ಮೂರ್ತಿಗಳು ಒಂದೆ ಕಡೆ ಇರುವ ದೇವಸ್ಥಾನ ಇರುವುದು ಕೂಡ ಇಲ್ಲೇ. ಉತ್ತರ ಪ್ರದೇಶ ಮೂಲದ ಅಪ್ಪಟ್ಟ ರಾಮಭಕ್ತರು, ಸಂತರು ಆಗಾಗ ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. ನಿತ್ಯವೂ ಶ್ರೀರಾಮ, ಶಬರಿ ದೇವಾಲಯದಲ್ಲಿ ಪೂಜೆ ನಡೆಯುತ್ತದೆ. ರಾಮಾಯಣಕ್ಕೆ ಕುರುಹಾಗಿ ನಿಂತಿರುವ ರಾಮಭಕ್ತೆ ಶಬರಿ ಕೊಳ್ಳದ ಅಭಿವೃದ್ಧಿ ಮಾತ್ರ ಮರಿಚಿಕೆಯಾಗಿ ಉಳಿದಿದೆ.


Spread the love

About Laxminews 24x7

Check Also

ಹುಬ್ಬಳ್ಳಿ ನೇಹಾ ಹಿರೇಮಠ ಕೊಲೆ ಪ್ರಕರಣ: ಹಂತಕ ಫಯಾಜ್ ಜಾಮೀನು ಅರ್ಜಿ ವಜಾ

Spread the loveಧಾರವಾಡ, (ಸೆಪ್ಟೆಂಬರ್ 03): ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದ (Neha Hiremath Murder Case) ಆರೋಪಿ ಫಯಾಜ್ ( accused …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ