ಬಳ್ಳಾರಿ: ಬಳ್ಳಾರಿ ಪಾಲಿಕೆಯ ಅಧಿಕಾರದ ಚುಕ್ಕಾಣಿ ಕಾಂಗ್ರೆಸ್‌ಗೆ ಒಲಿದಿದೆ. ನೂತನ ಮೇಯರ್ ಕಾಂಗ್ರೆಸ್‌ನ ಬಿ. ಶ್ವೇತಾ ಆಯ್ಕೆಯಾಗಿದ್ದಾರೆ.
ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು ದೊರೆಯಿತು. ಬಿಜೆಪಿ ಅಭ್ಯರ್ಥಿ ಹನುಮಂತ ಗುಡಿಗಂಟಿಗೆ ಸೋಲು ಎದುರಾಯಿತು.
ಹನುಮಂತ ಗುಡಿಗಂಟಿ ಬಳ್ಳಾರಿಯ ಒಂದನೇ ವಾರ್ಡಿನ ಬಿಜೆಪಿ ಸದಸ್ಯ ಆಗಿದ್ದರು. ಕಾಂಗ್ರೆಸ್ ನ ಬಿ. ಶ್ವೇತಾ ಗೆ 29 ಮತ ಪಡೆದರೆ ಹನುಮಂತ ಗುಡಿಗುಂಟಿಗೆ 12 ಮತ ಪಡೆದರು. ಬಿಜೆಪಿಯ ಒಬ್ಬ ಸದಸ್ಯೆ ಅನಾರೋಗ್ಯ ಹಿನ್ನೆಲೆ ಗೈರಾದರು. ಚುನಾವಣೆಯಲ್ಲಿ ಜಿಲ್ಲಾ ಸಚಿವ ನಾಗೇಂದ್ರ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಶಾಸಕ ಭರತ್ ರೆಡ್ಡಿ ಮತ ಚಲಾಯಿಸಿದರು.
ಮೇಯರ್ ಚುನಾವಣೆಯಲ್ಲಿ ಗೆಲುವಿನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ನಾಗೇಂದ್ರ, ಇಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನ ಒಗ್ಗಟ್ಟು ಪ್ರದರ್ಶನ ಆಗಿದೆ. ಪಕ್ಷದ ಹೈಕಮಾಂಡ್ ನಿರ್ಧಾರದಂತೆ ಮೇಯರ್ ಆಯ್ಕೆ ನಡೆದಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಚುನಾವಣಾ ಎದುರಿಸಿದ್ದರಿಂದ 29 ಕ್ಕೆ 29 ಮತ ಪಡೆಯುವ ಮೂಲಕ 31 ನೇ ವಾರ್ಡ್ ಸದಸ್ಯೆ ಶ್ವೇತಾ ಬಿ ಆಯ್ಕೆ ಆಗಿದ್ದಾರೆ ಎಂದರು.