Breaking News

ಮಾಗಡಿ ರೋಡ್, ತಾವರೆಕೆರೆ ಸೇರಿ ಮೂವತ್ತಕ್ಕೂ ಹೆಚ್ಚು ಕಡೆ 15 ದಿನ ವಿದ್ಯುತ್ ವ್ಯತ್ಯಯ

Spread the love

ಬೆಂಗಳೂರು, ಜ.09: ರಾಜಧಾನಿ ಬೆಂಗಳೂರಿನ ಮಾಗಡಿರೋಡ್, ತಾವರೆಕೆರೆ ಸೇರಿ ಮೂವತ್ತಕ್ಕೂ ಹೆಚ್ಚು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ (Bengaluru Power Cut). ಕೆಪಿಟಿಸಿಲ್ ಮಾಗಡಿ-ಬ್ಯಾಡರಹಳ್ಳಿ 66 ಕೆ.ವಿ. ಮಾರ್ಗದ ದುರಸ್ತಿ ಕಾರ್ಯ ಕೈಗೊಂಡಿರುವ ಹಿನ್ನೆಲೆ ಜ.10 ರಿಂದ ಜ.26ರವರೆಗೆ ಅಂದ್ರೆ ಒರೋಬ್ಬರಿ 16 ದಿನಗಳ ಕಾಲ ತಾವರೆಕೆರೆ ಹಾಗೂ ಮಾಚೋಹಳ್ಳಿ ಸುತ್ತಮುತ್ತ ಬೆಳಗ್ಗೆ 8ರಿಂದ ರಾತ್ರಿ 8ರ ಅವಧಿ ನಡುವೆ 2-3 ಗಂಟೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮೂಲಗಳು ತಿಳಿಸಿವೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

ತಾವರೆಕೆರೆ ವ್ಯಾಪ್ತಿಯ ಚನ್ನೇನಹಳ್ಳಿ, ಯರ್ರಪ್ಪ ಕೈಗಾರಿಕಾ ಪ್ರದೇಶ, ದೊಡ್ಡಾಲದ ಮರ, ಹೊನಗನಹಟ್ಟಿ, ಗಾಣಕಲ್ ಕೈಗಾರಿಕಾ ಪ್ರದೇಶ, ಯಲಚಗುಪ್ಪೆ, ಗಂಗಪ್ಪನಹಳ್ಳಿ, ಯಲ್ಲಪ್ಪನ ಪಾಳ್ಯ, ಕೆಂಪಗೊಂಡನಹಳ್ಳಿ, ನಾಗನಹಳ್ಳಿ, ಪೆದ್ದನಪಾಳ್ಯ, ದೇವಮಾಚೋಹಳ್ಳಿ. ಹಾಗೂ ಮಾಚೋಹಳ್ಳಿ ವ್ಯಾಪ್ತಿಯ ಕಾಚೋಹಳ್ಳಿ, ಕಲ್ಪಾ ಕೈಗಾರಿಕಾ ಪ್ರದೇಶ, ಚಿಕ್ಕಗೊಲ್ಲರಹಟ್ಟಿ, ಫಾರೆಸ್ಟ್ ಗೇಟ್ ಕೈಗಾರಿಕಾ ಪ್ರದೇಶ, ಕೆ.ಜಿ. ಲಕ್ಕೇನಹಳ್ಳಿ.

ಇನ್ನು ಮಂಚನಬೆಲೆ ಕಾಲೋನಿ, ಸೀಗೇಹಳ್ಳಿ ಗೇಟ್, ಕಡಬಗೆರೆ ಕ್ರಾಸ್, ಶ್ರೀನಿಧಿ ಲೇಔಟ್, ವಿನಾಯಕ ಬಡಾವಣೆ, ರಾಘವೇಂದ್ರ ಲೇಔಟ್, ಸೂರ್ತಿ ಬಡಾವಣೆ, ಕೆ.ಕೆ.ಲೇಔಟ್, ಅರ್ಕಾವತಿ ಲೇಔಟ್, ಮಹಿಮಣ್ಣನಪಾಳ್ಯ, ಲಕ್ಷ್ಮೀ ಬಡಾವಣೆ, ಕಿನ್ನಹಳ್ಳಿ ರಸ್ತೆ, ಸ್ಫೂರ್ತಿ ಬಡಾವಣೆ, ರಾಘವೇಂದ್ರ ಬಡಾವಣೆ, ಸೀಗೆಹಳ್ಳಿ, ಕಡಬಗೆರೆ, ಬೈಲಾಕೋನೆನಹಳ್ಳಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ