ಕಾರವಾರ: ಬಿಜೆಪಿಯವರದ್ದು ಮೂರು ಅಜೆಂಡಾ ಇದೆ. ಸುಳ್ಳು ಹೇಳೋದು, ಗಲಭೆ ಮಾಡೋದು, ದೇವರ ಹೆಸರಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದು ಎಂದು ಸಚಿವ ಮಂಕಾಳ ವೈದ್ಯ (Mankal Vaidya) ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು (BJP) ರಾಜಕಾರಣಕ್ಕೋಸ್ಕರ (Politics) ಏನು ಬೇಕಾದರೂ ಮಾಡುತ್ತಾರೆ.
ಬಿಜೆಪಿಯವರದ್ದು ಬೋಗಸ್ ಭಕ್ತಿ. ರಾಮಮಂದಿರ ಉದ್ಘಾಟನೆ ಆಗದೇ ಮಂತ್ರಾಕ್ಷತೆ ಕೊಡುತ್ತಿದ್ದಾರೆ. ಪೂಜೆಯೇ ಆಗದೇ ಮಂತ್ರಾಕ್ಷತೆ ಹೇಗೆ ಕೊಡುತ್ತಾರೆ? ಅಕ್ಷತೆ ಕೊಟ್ಟು, ಮಂತ್ರಾಕ್ಷತೆ ಕೊಟ್ಟು ಕರೆಯುವುದೇನೋ ಸರಿ. ಯಾಕೆ ಮೋದಿ ಫೋಟೋ, ಕಟೌಟ್ ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಅಕ್ಷತೆ ಕೊಡುವಲ್ಲಿ ಮೋದಿ ವಿಚಾರ ಏಕೆ ಹೇಳುತ್ತಾರೆ ಎಂದು ಕಿಡಿಕಾರಿದರು.
ಇದು ಯಾರ ಹಣ? ಹಣ ನಾವು ಕೂಡ ಕೊಟ್ಟಿದ್ದೇವೆ. ಇದೆಲ್ಲಾ ನಾಟಕವನ್ನು ಬಿಜೆಪಿಯವರು ಬಂದ್ ಮಾಡುವುದು ಒಳ್ಳೆಯದು. ಬಿಜೆಪಿಯವರು ಸತ್ಯ ಹೇಳುವುದಿಲ್ಲ. ಸುಳ್ಳನ್ನೇ ಹೇಳುತ್ತಾರೆ. ರಾಮನ ನಿಜಭಕ್ತರಾದರೇ ಹೀಗೆ ಮಾಡುವುದಿಲ್ಲ. ನಾವು ಕೂಡ ರಾಜ್ಯದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದೇವೆ ಎಂದರು.
ಬಿಕೆ ಹರಿಪ್ರಸಾದ್ ಅವರು ನೀಡಿದ ಗೋಧ್ರಾ ಹತ್ಯೆ ಹೇಳಿಕೆ ಸರಿಯಾಗಿದ್ದು, ಅವರು ಜನರಲ್ಲಿ ಜಾಗೃತಿ ಮೂಡಿಸಲು ಗೋದ್ರಾ ಹತ್ಯೆ ಹೇಳಿಕೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.
 Laxmi News 24×7
Laxmi News 24×7
				 
		 
						
					 
						
					 
						
					