ಬಾಗಲಕೋಟೆ, : ಜಿಲ್ಲೆಯ ಹುನಗುಂದ(Hunagunda) ತಾಲ್ಲೂಕಿನ ಅಮೀನಗಢ ಪಟ್ಟಣ ಪಂಚಾಯಿತಿ ಸದಸ್ಯ ಸಂಜು ಐಹೊಳಿ ವಿರುದ್ಧ ಮದುವೆ ಮಾಡಿಸುವುದಾಗಿವಂಚನೆ ಹಾಗೂ ಲೈಂಗಿಕಕಿರುಕುಳದ ಆರೋಪ ಕೇಳಿಬಂದಿದೆ. ಅಮೀನಗಢ ಪಟ್ಟಣದ ಯುವತಿ ಭಾಗ್ಯಲಕ್ಷ್ಮಿ ಯಂಕಂಚಿ ಎಂಬ ಯುವತಿ, ತನ್ನ ಪ್ರಿಯಕರನೊಂದಿಗೆ ಮದುವೆ ಮಾಡಿಸುವುದಾಗಿ ಬರೊಬ್ಬರಿ 9 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಇದಕ್ಕೆ ಆರೋಪಕ್ಕೆ ಗುರಿಯಾದ ವೃತ್ತಿಯಲ್ಲಿ ವಕೀಲ, ಪಟ್ಟಣ ಪಂಚಾಯತಿ ಸದಸ್ಯ ಹಾಗೂ ಜಯಕರ್ನಾಟಕ ಸಂಘಟನೆ ಹುನಗುಂದ ತಾಲ್ಲೂಕಾಧ್ಯಕ್ಷ ಆಗಿರುವ ಸಂಜು ಐಹೊಳಿ ಅಲ್ಲಗಳೆದಿದ್ದಾರೆ.
ಇದೆಲ್ಲ ಕಟ್ಟುಕಥೆ ಶುದ್ದು ಸುಳ್ಳು ಎಂದ ಆರೋಪಕ್ಕೆ ಗುರಿಯಾದ ಸಂಜು ಐಹೊಳಿ
ಇನ್ನು ಘಟನೆ ಕುರಿತು ಆರೋಪಕ್ಕೆ ಗುರಿಯಾದ ವಕೀಲ ಸಂಜು ಐಹೊಳಿ ಮಾತನಾಡಿ ‘ಇದೆಲ್ಲ ಕಟ್ಟುಕಥೆ, ಶುದ್ದು ಸುಳ್ಳು. ಆಕೆಯ ಲವರ್ ಸಾಗರ್ ಎಂಬಾತ ಲವ್ ಮಾಡಿ ಮದುವೆ ಮಾಡಿಕೊಳ್ಳಲು ಒಪ್ಪುತ್ತಿಲ್ಲ ಎಂದು ಭಾಗ್ಯಲಕ್ಷ್ಮಿ ಹಾಗೂ ಕುಟುಂಬಸ್ಥರು ನನ್ನ ಬಳಿ ಬಂದಿದ್ದರು. ನಾನೇ ನಮ್ಮ ಜಯಕರ್ನಾಟಕ ಸಂಘಟನೆ ಮೂಲಕ ಇಬ್ಬರ ಮದುವೆಯನ್ನು ಮಾಡಿಸಿದ್ದೇನೆ.