ಅವಧಿ ಮೀರಿ ಬೆಳಗಿನ ಜಾವದವರೆಗೆ ಸ್ಟಾರ್ ನಟ ಮತ್ತು ಅವರ ಸ್ನೇಹಿತರ ಬಳಗ, ಚಿತ್ರತಂಡ ಬೆಂಗಳೂರಿನ ಪಬ್ ವೊಂದರಲ್ಲಿ ಪಾರ್ಟಿ ಮಾಡಿರುವ ಪ್ರಕರಣದಲ್ಲಿ ಪಬ್ (Pub) ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ಅವಧಿ ಮೀರಿ ಬೆಳಗಿನ ಜಾವದವರೆಗೆ ಸ್ಟಾರ್ ನಟ ಮತ್ತು ಅವರ ಸ್ನೇಹಿತರ ಬಳಗ, ಚಿತ್ರತಂಡ ಬೆಂಗಳೂರಿನ ಪಬ್ ವೊಂದರಲ್ಲಿ ಪಾರ್ಟಿ ಮಾಡಿರುವ ಪ್ರಕರಣದಲ್ಲಿ ಪಬ್ (Pub) ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ನಡೆದ ಘಟನೆಯೇನು: ಇತ್ತೀಚೆಗೆ ಸ್ಟಾರ್ ನಟನ ಸಿನಿಮಾ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಅದರ ಖುಷಿಗಾಗಿ ಸಕ್ಸಸ್ ಸೆಲೆಬ್ರೇಷನ್ ಬಳಿಕ ಬೆಂಗಳೂರಿನ ರಾಜಾಜಿನಗರದ ಒರಾಯನ್ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್ನಲ್ಲಿ ಸ್ಟಾರ್ಸ್ ಪಾರ್ಟಿಗೆ ಎಲ್ಲರೂ ಸೇರಿದರು. ಪಾರ್ಟಿಯಲ್ಲಿ ಚಿತ್ರದ ನಟ, ನಿರ್ದೇಶಕ, ನಿರ್ಮಾಪಕ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಇದು ನಡೆದಿದ್ದು ಮೊನ್ನೆ ಜನವರಿ 3ರಂದು ರಾತ್ರಿ ಪಬ್ಗೆ ಸಿನಿಮಾ ತಂಡ ಆಗಮಿಸಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.