ಹಿರಿಯ ನಾಗರೀಕರಿಗೆ ವಿಶೇಷ ಕೌಂಟರ್ ಜತೆಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಮೇಳದಲ್ಲಿ ಕೇವಲ ತಿಂಡಿ ತಿನಿಸು ಅಷ್ಟೇ ಅಲ್ಲದೆ, ಬಟ್ಟೆ, ಸೌಂದರ್ಯವರ್ಧಕಗಳ ಮಳಿಗೆಗಳು, ಮಕ್ಕಳಿಗೆ ಆಟದ ವಲಯಗಳನ್ನೂ ಸ್ಥಾಪಿಸಲಾಗಿದೆ. ವಾಸವಿ ಕಾಂಡಿಮೆಂಟ್ಸ್ನ ಕೆ.ಎಸ್.ಸ್ವಾತಿ ಮಾತನಾಡಿ, ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸ್ಯಾನಿಟೈಸರ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಹಿರಿಯ ನಾಗರಿಕರು ಮತ್ತು ಗರ್ಭಿಣಿಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗಳಿವೆ ಎಂದು ಹೇಳಿದ್ದಾರೆ.
ಬಸವನಗುಡಿಯಲ್ಲಿ ಅವರೆಬೇಳೆ ಮೇಳ ಆರಂಭ
ಬೆಂಗಳೂರು: ಶ್ರೀ ವಾಸವಿ ಕಾಂಡಿಮೆಂಟ್ಸ್ ಆಯೋಜಿಸಿರುವ ವಾರ್ಷಿಕ ಅವರೆಬೇಳೆ ಮೇಳ ಶುಕ್ರವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿದ್ದು, ವಿವಿಧ ಖಾದ್ಯಗಳು ಜನ ಮನಸೆಳೆದವು.
24ನೇ ಆವೃತಿಯ ಅವರೆಬೇಳೆ ಮೇಳ ಇದಾಗಿದ್ದು, ಮೇಳದಲ್ಲಿ ವಿವಿಧ ಖಾದ್ಯಗಳನ್ನು ಸವಿಯುವ ಅವಕಾಶ ನಾಗರಿಕರಿಗೆ ಲಭಿಸುತ್ತಿದೆ. ಅವರೆ ದೋಸೆ, ಪಾಯಸ, ಮಂಚೂರಿಯನ್, ವಡೆ, ಕೋಡುಬಳೆ, ಐಸ್ಕ್ರೀಂ, ಹಲ್ವಾ ಸೇರಿದಂತೆ ನೂರಕ್ಕೂ ಹೆಚ್ಚು ತಿನಿಸುಗಳು ಈ ಮೇಳದಲ್ಲಿ ಲಭ್ಯವಿದೆ.
ಬೆಂಗಳೂರು: ನಾಳೆಯಿಂದ 4 ದಿನಗಳ ಕೃಷಿ ಮೇಳ ಆರಂಭಈ ವರ್ಷ ಸುಮಾರು 80 ಸ್ಟಾಲ್ಗಳಿವೆ. ದೋಸೆಯಂತಹ ಹೆಚ್ಚು ಬೇಡಿಕೆಯಿರುವ ತಿನಿಸುಗಳಿಗೆ ಸುಮಾರು ಐದು ಕೌಂಟರ್ಗಳನ್ನು ಇರಿಸಲಾಗಿದೆ.