Breaking News

ಕಾಂಗ್ರೆಸ್‌ನ ಈ 10 ಸಚಿವರು ಲೋಕಸಭಾ ಕಣಕ್ಕೆ? ಹೈಕಮಾಂಡ್‌ ಪಟ್ಟು, ಮಂತ್ರಿಗಳ ಇಕ್ಕಟ್ಟು

Spread the love

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಭರ್ಜರಿ ತಯಾರಿ ನಡೆಸುತ್ತಿದೆ. ಈ ಸಂಬಂಧ ಗುರುವಾರ (ಜ. 4) ನವ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಇಲ್ಲಿ ಹಲವು ವಿಚಾರಗಳು ಚರ್ಚೆಗೆ ಬರಲಿದೆ.

ಪ್ರಮುಖವಾಗಿ ನಿಗಮ – ಮಂಡಳಿಗಳ ನೇಮಕ ಹಾಗೂ ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾತುಕತೆ ನಡೆಯಲಿದೆ. ಈಗಾಗಲೇ ಹೈಕಮಾಂಡ್‌ ಬುಲಾವ್‌ ಮೇರೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅಲ್ಲಿಗೆ ತೆರಳಿದ್ದಾರೆ. ಇನ್ನು ರಾಜ್ಯ ನಾಯಕರ ನಿರಾಸಕ್ತಿ ನಡುವೆಯೂ 10ಕ್ಕೂ ಹೆಚ್ಚು ಸಚಿವರನ್ನು ಲೋಕಸಭಾ ಕಣಕ್ಕೆ ಇಳಿಸಲು ಕಾಂಗ್ರೆಸ್‌ ಹೈಕಮಾಂಡ್‌ ಆಸಕ್ತಿ ತೋರಿದೆ ಎಂಬ ವಿಷಯ ಗೊತ್ತಾಗಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಈಗಾಗಲೇ ರಾಜ್ಯ ಘಟಕದ ಪಟ್ಟಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಜಿಲ್ಲಾ ಘಟಕಗಳಿಂದ ಮಾಹಿತಿ ಪಡೆದು ಪಟ್ಟಿ ಸಿದ್ಧಪಡಿಸಿದ್ದಾರೆ. ಆದರೆ, ಈ ಪಟ್ಟಿ ಬಗ್ಗೆ ಹೈಕಮಾಂಡ್ ನಾಯಕರಿಗೆ ಅಷ್ಟಾಗಿ ಮನಸ್ಸಿಲ್ಲ. ಶತಾಯಗತಾಯ ಅತಿ ಹೆಚ್ಚು ಸೀಟ್‌ಗಳನ್ನು ಪಡೆಯಬೇಕು ಎಂಬ ಗುರಿಯನ್ನು ಹಾಕಿಕೊಂಡಿರುವ ಕಾಂಗ್ರೆಸ್‌ ದಿಲ್ಲಿ ನಾಯಕರು, ಇದಕ್ಕಾಗಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಲೆಕ್ಕಾಚಾರದಲ್ಲಿ ಇದ್ದಾರೆ. ಆದರೆ, ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿ ಕೊರತೆ ಎದುರಾಗಿದೆ.

ಆ ಕ್ಷೇತ್ರಗಳು ಯಾವುವು?

  • ಬೆಳಗಾವಿ
  • ಬೀದರ್
  • ವಿಜಯಪುರ
  • ಬಳ್ಳಾರಿ
  • ತುಮಕೂರು
  • ಮೈಸೂರು
  • ಚಾಮರಾಜನಗರ
  • ಮಂಡ್ಯ
  • ಬೆಂಗಳೂರು ಉತ್ತರ.
  • ಬೆಂಗಳೂರು ದಕ್ಷಿಣ
  • ಬೆಂಗಳೂರು ಕೇಂದ್ರ
  • ಚಿಕ್ಕಮಗಳೂರು ಉಡುಪಿ
  • ಉತ್ತರ ಕನ್ನಡ
  • ದಕ್ಷಿಣ ಕನ್ನಡ

ಹೈಕಮಾಂಡ್ ಲಿಸ್ಟ್‌ನಲ್ಲಿ ಇರುವ ಸಚಿವರು?

  • ಮಹದೇವಪ್ಪ
  • ಜಮೀರ್ ಅಹಮದ್
  • ರಾಮಲಿಂಗಾರೆಡ್ಡಿ
  • ಕೃಷ್ಣಬೈರೇಗೌಡ
  • ಕೆ.ಎಚ್.‌ ಮುನಿಯಪ್ಪ
  • ಕೆ.ಎನ್.‌ ರಾಜಣ್ಣ
  • ನಾಗೇಂದ್ರ
  • ಈಶ್ವರ್ ಖಂಡ್ರೆ
  • ಸತೀಶ್ ಜಾರಕಿಹೊಳಿ
  • ಲಕ್ಷ್ಮೀ ಹೆಬ್ಬಾಳ್ಕರ್

ಇವರಿಗೆ ಇಲ್ಲ ಆಸಕ್ತಿ!

ಆದರೆ, ಸಚಿವರಿಗೆ ಲೋಕಸಭಾ ಚುನಾವಣೆ ಕಣಕ್ಕೆ ಇಳಿಯಲು ಅಷ್ಟಾಗಿ ಆಸಕ್ತಿ ಇಲ್ಲ ಎನ್ನಲಾಗಿದೆ. ಜತೆಗೆ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ ಅವರಿಗೂ ಈ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಸೋತರೆ ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತದೆ ಎಂಬ ಕಾರಣವನ್ನೂ ಹಲವರು ನೀಡುತ್ತಿದ್ದಾರೆ.

ಹಿಂದೇಟಿಗೆ ಕಾರಣವೇನು?

ಲೋಕಸಭಾ ಚುನಾವಣೆಯಲ್ಲಿ ಸಚಿವರನ್ನು ಕಣಕ್ಕಿಳಿಸಲು ಹೈಕಮಾಂಡ್‌ ಪ್ಲಾನ್ ಮಾಡಿದೆಯಾದರೂ ಸ್ಪರ್ಧೆಗೆ ಹಲವು ಸಚಿವರು ನಿರಾಸಕ್ತಿ ತೋರಿದ್ದಾರೆ ಎಂದು ತಿಳಿದುಬಂದಿದೆ. ಹೈಕಮಾಂಡ್‌ ನಿರ್ಧಾರವನ್ನು ಈಗಾಗಲೇ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಆದರೆ, ತಾವು ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ. ಒಂದು ವೇಳೆ ನಾವು ಸೋತರೆ ವಿರೋಧ ಪಕ್ಷಗಳಿಗೆ ಆಹಾರವಾಗಬೇಕು ಎಂಬ ಕಾರಣವನ್ನು ಇಡುತ್ತಿದ್ದಾರೆ. ಹೀಗಾಗಿ ನೀವು ಪರ್ಯಾಯ ಅಭ್ಯರ್ಥಿಯನ್ನು ಹುಡುಕಿ ಕಣಕ್ಕಿಳಿಸುವುದೇ ಸೂಕ್ತ ಎಂದು ಹೇಳುತ್ತಿದ್ದಾರೆ.

ಕುಟುಂಬ ವರ್ಗಕ್ಕೆ ನೀಡಲು ಮನವಿ

ಇನ್ನು ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಹೋದ್ಯೋಗಿಗಳ ಬೆಂಬಲಕ್ಕೆ ನಿಂತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ಬೇಡ. ಇದು ವಿಪಕ್ಷಗಳಿಗೆ ಅಸ್ತ್ರವಾಗಲಿದೆ ಎಂದು ಹೇಳಿದ್ದಾರೆನ್ನಲಾಗಿದೆ.

ಇನ್ನು ನಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಬೇರೆ ಸಂದೇಶ ರವಾನೆಯಾಗಲಿದೆ. ಫಲಿತಾಂಶ ವ್ಯತಿರಿಕ್ತವಾಗಿ ಬಂದಲ್ಲಿ ಇಲಾಖೆಯ ಮೇಲಿನ ಹಿಡಿತ ತಪ್ಪುತ್ತದೆ. ನಮ್ಮ ಸ್ಪರ್ಧೆ ಬದಲಿಗೆ ಕುಟುಂಬ ವರ್ಗಕ್ಕೆ ಇಲ್ಲವೇ, ನಾವು ಸೂಚಿಸಿದವರಿಗೆ ಟಿಕೆಟ್ ನೀಡಬೇಕು ಎಂದು ಮಂತ್ರಿಗಳು ಮನವಿ ಮಾಡಿದ್ದಾರೆ ಎನ್ನಲಾಗಿದೆ.


Spread the love

About Laxminews 24x7

Check Also

ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು

Spread the love ಹುಕ್ಕೇರಿ : ಗೋಕಾಕ ತಾಲೂಕಿನ ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಧಾರಾಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ