Breaking News

ನಾನು ರಾಮ ಭಕ್ತ, ರಾಮನೇ ನನ್ನ ಮನೆದೇವರು ಅಂದ ಮುಸ್ಲಿಂ ಕಾಂಗ್ರೆಸ್‌ ಶಾಸಕ!

Spread the love

ರಾಮನಗರ: ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆ (Ayodhya Rama Mandir) ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಧರ್ಮಯುದ್ಧ (Congress-BJP Fight) ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್‌ ಶಾಸಕರೊಬ್ಬರು ರಾಮೋತ್ಸವದ ಜಪ (Ramotsava Jap by Muslim Congress MLA) ಮಾಡಿದ್ದಾರೆ.

ಅದರಲ್ಲೂ ಮುಸ್ಲಿಂ ಶಾಸಕರು ಈ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ʻʻನಾನೂ ಕೂಡಾ ರಾಮಭಕ್ತ, ನಾನು ರಾಮನನ್ನು ಪೂಜೆ ಮಾಡ್ತೀನಿʼʼ ಹೀಗೆಂದು ಹೇಳಿದವರು ರಾಮನಗರ ಶಾಸಕ ಇಕ್ಬಾಲ್ ಹುಸೇನ್ (Ramanagar MLA Iqbal hussain). ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ರಾಮನಗರದಲ್ಲಿ ರಾಮೋತ್ಸವವನ್ನ ನಡೆಸಬೇಕು ಎಂದು ಚಿಂತನೆ ಮಾಡಿದ್ದೇವೆ. ಅನ್ನು ಭಕ್ತಿಪೂರ್ವಕವಾಗಿ ಮಾಡಿಯೇ ಮಾಡುತ್ತೇವೆʼʼ ಎಂದು ಹೇಳಿದರು,

ʻʻನಾನೂ ರಾಮನ ಭಕ್ತ, ನಾನು ಎಲ್ಲಾ ದೇವರನ್ನು ಪೂಜಿಸ್ತೇನೆ. ನಾನು ಚಿಕ್ಕವಯಸ್ಸಿನಿಂದಲೇ ಎಲ್ಲಾ ದೇವರ ಪೂಜೆ ಮಾಡಿದ್ದೇನೆ. ಹಾಗೆಯೇ ರಾಮನ ಪೂಜೆಯನ್ನೂ ಮಾಡ್ತೇನೆʼʼ ಎಂದಿರು ಅವರು, ರಾಮ ಮಂದಿರ ವಿಚಾರವನ್ನು ಯಾರೋ ರಾಜಕೀಯವಾಗಿ ಬಳಸಿಕೊಳ್ಳಬಹುದು. ಆದರೆ ನಾವು ಇದನ್ನ ರಾಜಕೀಯವಾಗಿ ಬಳಸಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದರು.

ನಮಗೆ ರಾಮ ಹೊಸಬನಲ್ಲ, ನಮ್ಮ ಮನೆ ದೇವರು

ಕೆಲವರು ಜನರನ್ನು ಒಡೆದು ಅದರಲ್ಲಿ ರಾಜಕೀಯ ಮಾಡ್ತಿದ್ದಾರೆ. ಆದರೆ ಕಾಂಗ್ರೆಸ್‌ಗೆ ತನ್ನದೇ ಆದ ಬದ್ಧತೆ, ಸಿದ್ಧಾಂತ ಇದೆ. ಇದನ್ನೆಲ್ಲ ಲೋಕಸಭಾ ಚುನಾವಣೆ ದೃಷ್ಟಿಯಿಂದ ಮಾಡುತ್ತಿದ್ದಾರೋ ಇಲ್ವೋ ಗೊತ್ತಿಲ್ಲ. ಅದು ಅವರಿಗೆ ಬಿಟ್ಟಿರೋ ವಿಚಾರ. ಆದರೆ ನಾವು ರಾಮನನ್ನು ಮನೆ ದೇವರು ಅಂತ ಪೂಜೆ ಮಾಡ್ತೀವಿ. ಅವರಿಗೆ ರಾಮನ ಪೂಜೆ ಹೊಸದಿರಬಹದು, ಆದರೆ ನಮಗೆ ಹೊಸದೇನಲ್ಲ. ಅದಕ್ಕಾಗಿ ರಾಜಕಾರಣಕ್ಕೆ ಬಳಸಿಕೊಳ್ತಿದ್ದಾರೆ ಎಂದು ಶಾಸಕ ಇಕ್ಬಾಲ್‌ ಹುಸೇನ್‌ ಹೇಳಿದ್ದಾರೆ.

ಸರ್ವ ಧರ್ಮಗಳಿಗೆ ಪ್ರಿಯ ಶಾಸಕರು

ರಾಮ ನಗರ ಶಾಸಕ ಇಕ್ಬಾಲ್‌ ಹುಸೇನ್‌ ಅವರು ತಮ್ಮ ಭಾಗದಲ್ಲಿ ಎಲ್ಲ ಧರ್ಮದವರ ಜತೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಜತೆಗೆ ರಾಷ್ಟ್ರ ಭಕ್ತಿಯ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾರೆ. ದೇವಸ್ಥಾನಗಳಿಗೆ ಭೇಟಿ ನೀಡುವುದು, ಪೂಜೆಗಳಿಗೆ ಭಾಗಿಯಾಗುವುದು ಅವರ ನಿತ್ಯ ಕಾಯಕ. ಅವರು ಸ್ವಾತಂತ್ರ್ಯ ದಿನಾಚರಣೆಯಂದು ರಾಮ ನಗರ ಜಿಲ್ಲೆಯ ಪ್ರತಿಯೊಂದು ಶಾಲೆಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ಲಡ್ಡು ವಿತರಣೆ ಮಾಡುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂ.ಯನ್ನು ವೆಚ್ಚ ಮಾಡುತ್ತಾರೆ.


Spread the love

About Laxminews 24x7

Check Also

ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು

Spread the love ಹುಕ್ಕೇರಿ : ಗೋಕಾಕ ತಾಲೂಕಿನ ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಧಾರಾಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ