Breaking News

ಕುಡುಕರ ಅಡ್ಡೆಯಾದ ಹಾವೇರಿ ತಾಲೂಕು ಕಚೇರಿ

Spread the love

ಹಾವೇರಿ ತಾಲೂಕು ಪಂಚಾಯತಿ ಆವರಣ ಗಬ್ಬು ನಾರುತ್ತಿದೆ. ಇಲ್ಲಿಗೆ ಬರುವ ನೂರಾರು ಜನರಿಗೆ ಮೂಲಭೂತ ಸೌಕರ್ಯ ಇಲ್ಲವಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.ಅದು ಏಲಕ್ಕಿ ಕಂಪಿನ ನಗರದ ಹೃದಯ ಭಾಗ. ನಿತ್ಯ ನೂರಾರು ಜನ ಬಂದು ಹೋಗುವ ಸ್ಥಳ. ಆದರೆ ಆ ಸ್ಥಳ ಇತ್ತೀಚೆಗೆ ಕುಡುಕರಅಡ್ಡೆಯಾಗಿದೆ.

ಜೊತೆಗೆ ಪುಂಡಪೋಕರಿಗಳಿಗೆ ಅನೈತಿಕ ಚಟುವಟಿಕೆ (anti social elements) ತಾಣವಾಗಿ ಮಾರ್ಪಟಿದೆ. ಇದನ್ನು ಕಣ್ಣಾರೆ ಕಂಡ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿ, ಕಿವಿಯಿದ್ದು ಕಿವುಡರಾಗಿ, ಬಾಯಿ ಇದ್ದು ಮೂಕರಾಗಿ ಎಲ್ಲ ದೃಶ್ಯವನ್ನು ಮೂಖ ಪ್ರೇಕ್ಷಕರಾಗಿ ನೋಡುತ್ತಿದ್ದಾರೆ. ಯಾವುದು ಆ ಕಚೇರಿ ಅಂತಿರಾ…? ಈ ಸ್ಟೋರಿ ನೋಡಿ

ಹೌದು ಹಾವೇರಿ ಜಿಲ್ಲೆಯಾಗಿ ರಜತ ಮಹೋತ್ಸವ ಆಚರಿಸಿದರೂ ಹೇಳಿಕೊಳ್ಳುವ ಮಟ್ಟದಲ್ಲಿ ಹಾವೇರಿ ಅಭಿವೃದ್ಧಿ ಆಗಿಲ್ಲ ಅನ್ನುವುದು ಈ ಭಾಗದ ಜನರ ಅಳಲು. ಇದಕ್ಕೆ ಕನ್ನಡಿ ಹಿಡಿಯುವಂತಿರುವುದು ಹಾವೇರಿ ತಾಲೂಕು ಪಂಚಾಯತಿ (Haveri Taluk Office) ಆವರಣ. ನಗರದ ಹೃದಯ ಭಾಗದಲ್ಲಿಯೇ ಇದ್ದರೂ ಇದು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

ಇದೇ ಆವರಣದಲ್ಲಿ ಲೋಕಸಭಾ ಸದಸ್ಯ ಶಿವಕುಮಾರ್ ಉದಾಸಿಯವರ ಕಚೇರಿ ಇದೆ. ಜೊತೆಗೆ ಉಪಸಭಾಪತಿಯಾಗಿರುವ ರುದ್ರಪ್ಪ ಲಮಾಣಿಯವರ ಕಚೇರಿ ಇದೆ. ಆದರೂ ಸಹಿತ ರಾತ್ರಿಯಾದರೆ ಸಾಕು ಇಲ್ಲಿ ಕುಡುಕರು, ಪುಂಡಪೋಕರಿಗಳು ಬಂದು ಮಾಡಬಾರದನ್ನು ಮಾಡಿ ಹೋಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿ ಇರುವ ಹತ್ತಾರು ವರ್ಷದಿಂದ ಪಾಳು ಬಿದ್ದಿರುವ ವಸತಿ ಗೃಹಗಳು ಅಂತಿದ್ದಾರೆ ಸಾರ್ವಜನಿಕರು.


Spread the love

About Laxminews 24x7

Check Also

ಮಹಿಷ ದಸರಾ | ಯಾರಿಗೂ ತೊಂದರೆ ಆಗದಂತೆ ಮಾಡಿಕೊಳ್ಳಬಹುದು: ಮಹದೇವಪ್ಪ

Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ