ಶಿವಮೊಗ್ಗ: ವಿಜಯೇಂದ್ರ ಮೊನ್ನೆ ಮೊನ್ನೆ ಯಡಿಯೂರಪ್ಪ ಪರ ಮತ ಕೇಳಿರಬೇಕು. ನಾನು ಆಗಲೇ ನಿಮ್ಮ ತಂದೆಯವರ ಪರ ಪ್ರಚಾರ ಮಾಡಿದ್ದೆ. ವಿಜಯೇಂದ್ರಗೆ ಒಂದು ಕಿವಿ ಮಾತು ಹೇಳುತ್ತೇನೆ. 2004 ರಲ್ಲಿ ಮೊದಲ ಚುನಾವಣೆಗೆ ನಿಂತಿದ್ದೆ. ನಾನು ನಾಮಪತ್ರ ಬೆಳಗ್ಗೆ ಸಲ್ಲಿಸಿ ಸಂಜೆ ಯಡಿಯೂರಪ್ಪ ನವರ ನಾಮಪತ್ರ ಸಲ್ಲಿಸಲು ಹೋಗಿದ್ದೆ.
1999 ಯಡಿಯೂರಪ್ಪ ನವರು ಸೋತಿದ್ದಾಗ ಬಂಗಾರಪ್ಪನವರು ಬಿಜೆಪಿಗೆ ಹೋಗಿದ್ದರು. ಅವತ್ತು ಒಂದು ಸಭೆ ನಡೆದಿತ್ತು. ಆ ಸಭೆಯಲ್ಲಿ ವಿಜಯೇಂದ್ರ ಇರಲಿಲ್ಲ ಅವರು ಹೊರಗಡೆ ಇದ್ದರು. ಯಡಿಯೂರಪ್ಪನವರು ರಾಜ್ಯ ಸುತ್ತಬೇಕು ಕಣಪ್ಪ ಅಂದ್ರೂ. ಆಗ ನಮ್ಮ ನಾಯಕ ಯಡಿಯೂರಪ್ಪ ಆಗಿದ್ದರು. ನನ್ನ ಪರವಾಗಿ ಚುನಾವಣೆ ಪ್ರಚಾರ ಮಾಡಬೇಕು ಅಂದಿದ್ದರು. ಯತ್ನಾಳ್ ಆರೋಪಕ್ಕೆ ಮೊದಲ ಉತ್ತರ ಕೊಡಿ ವಿಜಯೇಂದ್ರ ಅವರೇ. ಆಮೇಲೆ ನನ್ನ ರಾಜೀನಾಮೆ ಕೇಳಿ. ಕೇಲವು ಪಟಿಂಗರಿಗೆ ದುಡ್ಡು ಕೊಟ್ಟು ಟ್ವೀಟ್ ಮಾಡುವುದು, ಕೆಲಸ ಇಲ್ಲದ ಬಡಗಿ ಏನು ಮಾಡಿದನಂತೆ….. ತಂದೆಯವರಿಗೆ ನಾನು ಯಾವುದೇ ಕೇಸ್ ಹಾಕಿಸಿಲ್ಲ. ನೀವು ಮಾಡಿದ್ದೀರೆಂದು ನಾನು ಹೇಳುತ್ತಿಲ್ಲ. ನನ್ನ ರಾಜೀನಾಮೆ ಕೇಳಲು ನೀವು ಯಾರು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಟ್ಟೀಟ್ ಮಾಡಿದ ಮೇಲೆ ಜನ ನೂರು ಕೋಟಿ ಕೊಡಲು ಬಂದರು. ನನ್ನ ಬಳಿ ನಾನು ದುಡಿದಿರುವ ದುಡ್ಡು ಇದೆ. ನನ್ನ ತಟ್ಟೆ ತುಂಬಾ ಕ್ಲಿನ್ ಇದೆ. ವಿಜಯೇಂದ್ರ ಅವರೇ ನಿಮ್ಮ ತಟ್ಟೆಯಲ್ಲಿ ಸತ್ತು ಹೋಗಿರುವ ಹೆಗ್ಗಣವಿದೆ. ನನ್ನ ವಿಚಾರಕ್ಕೆ ಬರಬೇಡಿ ನಾನು ಹೊಟ್ಟೆಗೆ ಅನ್ನ ತಿನ್ನುತ್ತೇನೆ ಎಂದರು.
Laxmi News 24×7