ದೋಟಿಹಾಳ: ಸ್ವಾತಂತ್ರ‍್ಯ ಸಿಕ್ಕು 75 ವರ್ಷ ಕಳೆದರೂ ಇನ್ನೂ ರಾಜ್ಯದ ಎಷ್ಟೋ 3-6 ವರ್ಷದೊಳಗಿನ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಸಿಗುತ್ತಿಲ್ಲ ಎಂಬುವುದೇ ಒಂದು ದುರಂತವಾಗಿದೆ. ಇದಕ್ಕೆ ತಾಜಾ ಉದಾಹರಣೆ, ಕೊಪ್ಪಳ ಜಿಲ್ಲೆಯ ಗಡಿಭಾಗದಲ್ಲಿರುವ ಕುಷ್ಟಗಿ ತಾಲೂಕಿನ ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ರಾಮ್‌ಜೀ ನಾಯಕ್ ತಾಂಡದ 3-6 ವರ್ಷದ ಒಳಗಿನ ಮಕ್ಕಳ ಸ್ಥಿತಿ.
ರಾಮಜೀ ನಾಯಕ್ ತಾಂಡದಲ್ಲಿ 3-6 ವರ್ಷದ ಒಳಗಿನ ಸುಮಾರು 18-20 ಮಕ್ಕಳು ಇದ್ದಾರೆ. ಈ ಮಕ್ಕಳಿಗೆ ಇದುವರೆಗೂ ಶಾಲಾ ಪೂರ್ವ ಶಿಕ್ಷಣ ಸಿಗುತ್ತಿಲ್ಲ. ಶಾಲಾ ಪೂರ್ವ ಶಿಕ್ಷಣ ಹಂತದಲ್ಲಿ ಓದುವ 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿ ಪೋಷಕರ ಪಾತ್ರ ಮಹತ್ವದಾಗಿರುತ್ತದೆ. ಹಾಗೇ ಶಾಲಾ ಪೂರ್ವ ಶಿಕ್ಷಣ ಪಡೆಯುವ ಮಕ್ಕಳ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಬೇಕಾದ ವ್ಯವಸ್ಥೆ ಹಾಗೂ ಸಾಮಾನ್ಯ ಜ್ಞಾನದಿಂದಾಗಿ ಮಕ್ಕಳ ಬೌದ್ಧಿಕ ಸಾಮರ್ಥ್ಯವು ವೃದ್ಧಿಯಾಗಲು ಅಂಗನವಾಡಿ ಕೇಂದ್ರ ಮುಖ್ಯ.
ರಾಜ್ಯದ ಎಷ್ಟೋ ತಾಂಡಗಳ ಮಕ್ಕಳು ಶಾಲಾ ಪೂರ್ವ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪ್ರಾಥಮಿಕ ಪೂರ್ವ ಶಿಕ್ಷಣವು ಮಕ್ಕಳ ಶಿಕ್ಷಣದ ತಳಹದಿಯಾಗಿದೆ. ಇಲ್ಲಿಯ ಶಿಕ್ಷಣ ಮುಂದಿನ ಶಿಕ್ಷಣದ ಪ್ರತಿಯೊಂದು ಹಂತದಲ್ಲಿ ಯಶಸ್ಸನ್ನು ಅವಲಂಭಿಸಿದೆ. ಶಾಲಾ ಶಿಕ್ಷಣ ಸಿಗದ ಎಷ್ಟೋ ಮಕ್ಕಳು ಶಾಲೆಯಿಂದ ಉತ್ತಮ ಶಿಕ್ಷಣ ಕಲಿಯದೆ. ಅನುತ್ತೀರ್ಣರಾಗಿ ಶಾಲೆಯಿಂದ ಹೊರಬೀಳುವ ಅಪಾಯವಿರುತ್ತದೆ.