ರಾಯಚೂರಿನಲ್ಲಿ 7 ಮತ್ತು 9 ನೇ ತರಗತಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಶಾಲೆಗೆ ಪೆನ್ ಬದಲು ಗನ್ ತೆಗೆದುಕೊಂಡು ಬಂದಿದ್ದಾನೆ ಶಾಲಾ ವಿದ್ಯಾರ್ಥಿ. ರಾಯಚೂರು ನಗರದ ಶ್ರೀಮಲ್ ರಿಖನ್ ಚಂದ್ ಸುಖಾಣಿ ಪ್ರೌಢ ಶಾಲೆಯಲ್ಲಿ ಘಟನೆ ನಡೆದಿದೆ. ಗನ್, ಚಾಕು ಹಾಗೂ ಮಾರಾಕಾಸ್ತ್ರಗಳನ್ನು ತಂದಿದ್ದಾನೆ ವಿದ್ಯಾರ್ಥಿ.
7ನೇ ತರಗತಿ ವಿದ್ಯಾರ್ಥಿ ಶಾಲೆಗೆ ಗನ್ ತೆಗೆದುಕೊಂಡು ಬಂದಿದ್ದು, ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ರಾಯಚೂರು ನಗರ ಪಶ್ಚಿಮ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಬಾಲಕನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಹೊಸ ವರ್ಷಾಚರಣೆ ವೇಳೆ ಪ್ರೌಢ ಶಾಲಾ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿಗಳ ಕೈಯಲ್ಲಿ ಏರ್ ಗನ್, ಬಟನ್ ಚಾಕು, ಪಂಚ್, ಬೆತ್ತ ತಂದಿರುವುದು ಆತಂಕಕ್ಕೆ ಕಾರಣವಾಗಿದೆ. ಓರ್ವ ವಿದ್ಯಾರ್ಥಿ ಕೈ ಬೆರಳಿಗೆ ಗಾಯವಾಗಿದೆ. ರಾಯಚೂರಿನ ಜ್ಯೋತಿ ಕಾಲೋನಿಯ ಶ್ರೀಮಲ್ ರಿಖಬ್ ಚಂದ್ ಸುಖಾಣಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ.
ಘಟನೆ ಮುಚ್ಚಿಡುವ ಪ್ರಯತ್ನ ಮಾಡಿದ್ರಾ ಡಿಡಿಪಿಐ..?
ರಾಯಚೂರಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳ ಗ್ಯಾಂಗ್ ವಾರ್ ಮಾಡಿರುವ ಪ್ರಕರಣ ಬಳಿಕ ಪಶ್ಚಿಮ ಪೊಲೀಸ್ ಠಾಣೆಗೆ ಡಿಡಿಪಿಐ ಕೆ.ಡಿ ಬಡಿಗೇರ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ವಿದ್ಯಾರ್ಥಿಗಳು ಹಾಗು ಪೊಲೀಸರ ಜೊತೆ ಸಮಾಲೋಚನೆ ನಡೆಸಿದ DDPI. ಸಮಾಲೋಚನೆ ಬಳಿಕ ಮಾಧ್ಯಮಗಳಿಗೆ ಕೆ.ಡಿ ಬಡಿಗೇರ ಮಾಹಿತಿ ನೀಡಿದ್ದು, ಇದೊಂದು ಶಾಲೆಯ ಕಾಂಪೌಂಡ್ ಹೊರಗಡೆ ನಡೆದಿರೋ ಘಟನೆ. ಶಿಕ್ಷಕರು ಮತ್ತು ಪೋಷಕರ ಜತೆ ಹೀಗಾಗಲೇ ಸಭೆ ಮಾಡಿದ್ದೇನೆ. ಘಟನೆಯಲ್ಲಿ ಯಾವ ಮಕ್ಕಳಿಗೂ ಗಾಯಗಳು ಆಗಿಲ್ಲ. ಪೋಷಕರು ಈವರೆಗೂ ಪೊಲೀಸ್ ಠಾಣೆಗೆ ಲಿಖಿತವಾಗಿ ದೂರು ನೀಡಿಲ್ಲ ಎಂದಿದ್ದಾರೆ. ಜೊತೆಗೆ ಮಕ್ಕಳ ಕೈಯಲ್ಲಿ ಇದ್ದದ್ದು ಗನ್ ಅಲ್ಲ, ಜಾತ್ರೆಯ ಆಟಿಕೆ ಗನ್ ಅದು. ಪೊಲೀಸರು ನಿಯಮಾನುಸಾರ ಕಾನೂನು ಕ್ರಮಕೈಗೊಳ್ತಾರೆ. ಶಾಲೆ ಆಡಳಿತ ಮಂಡಳಿಯವರಿಗೆ ನೋಟಿಸ್ ನೀಡಿ ಘಟನೆಯ ಸಂಪೂರ್ಣ ವಿವರ ಕೊಡುವಂತೆ ಹೇಳ್ತೇವೆ ಎಂದಿದ್ದಾರೆ.