Breaking News

ರಾಜ್ಯದಲ್ಲಿ ನಿನ್ನೆ 193 ಕೋಟಿ ಮೌಲ್ಯದ ‘ಮದ್ಯ’ ಮಾರಾಟ

Spread the love

ರಾಜ್ಯದಲ್ಲಿ ನಿನ್ನೆ 193 ಕೋಟಿ ಮೌಲ್ಯದ ‘ಮದ್ಯ’ ಮಾರಾಟ

ಬೆಂಗಳೂರು : ರಾಜ್ಯದಲ್ಲಿ ಹೊಸ ವರ್ಷದ ಪಾರ್ಟಿಗೆ 193 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿದೆ.

2023ರ ಕೊನೆಯ ದಿನವಾದ ನಿನ್ನೆ ಭಾನುವಾರದಿಂದು 193 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಈ ಮೂಲಕ ಒಂದೇ ದಿನ ಭರ್ಜರಿ ಲಿಕ್ಕರ್ ಮಾರಾಟ ಆಗಿದೆ.

ಡಿಸೆಂಬರ್ ತಿಂಗಳಲ್ಲಿ ಇಂಡಿಯನ್ ಮೇಡ್ ಲಿಕ್ಕರ್ 3,07,953 ಬಾಕ್ಸ್, ಬಿಯರ್ 1,95,005 ಬಾಕ್ಸ್ ಮಾರಾಟವಾಗಿದೆ. ಈ ವರ್ಷದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ಹರಿದುಬಂದಿದೆ. ಮದ್ಯದ ದರ ಹೆಚ್ಚಳವಾದರೂ ಚಿಂತೆಯಿಲ್ಲ ಎಂದು ಮದ್ಯ ಪ್ರಿಯರು ಹೊಸ ವರ್ಷಾಚರಣೆಗೆ ಮದ್ಯದ ಕಿಕ್ ಏರಿಸಿಕೊಂಡಿದ್ದಾರೆ.

ರಾಜ್ಯದ ಜನರು ಬಹಳ ಸಂಭ್ರಮದಿಂದ ಹೊಸ ವರ್ಷವನ್ನು ವೆಲ್ ಕಮ್ ಮಾಡಿದ್ದಾರೆ. ಬೆಂಗಳೂರಿನಲ್ಲಂತೂ ‘ಎಣ್ಣೆಯ ಮತ್ತೇ ಗಮ್ಮತ್ತು’ ಎಂಬಂತೆ ನಾರಿಯರು, ಯುವಕರು ಎಣ್ಣೆಯಲ್ಲಿ ಮಿಂದೆದಿದ್ದಾರೆ. ಕೆಲವು ಯುವತಿಯರಂತೂ ನಡುರಸ್ತೆಯಲ್ಲೇ ವಾಲಾಡಿ, ತೋರಾಡಿದ್ದಾರೆ. ನಂತರ ಪೊಲೀಸರು ಯುವತಿಯರನ್ನು ಬಹಳ ಕಷ್ಟಪಟ್ಟು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿಕೊಟ್ಟಿದ್ದಾರೆ.


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ