ಭಕ್ತರಿಗೆ ವ್ಯವಸ್ಥೆ ಮಾಡದ ಕೇರಳ ಸರ್ಕಾರ: ಮುತಾಲಿಕ್ ಕಿಡಿ
ಅಯ್ಯಪ್ಪ ದೇವಸ್ಥಾನದಲ್ಲಿ ಮೂರು ಸಾವಿರ ಕೋಟಿ ರೂಗಿಂತಲೂ ಆದಾಯ ಜಾಸ್ತಿ ಇದೆ. ಪಾರ್ಕಿಂಗ್ ಒಂದು ಕೋಟಿ ವಾಹನಗಳಾಗುತ್ತವೆ. ಒಂದು ವಾಹನಕ್ಕೆ ನಲವತ್ತು ರೂಪಾಯಿ ತೆಗೆದುಕೊಳ್ತಾರೆ. ಎಲ್ಲ ಮೂಲಗಳಿಂದ ಮೂರು ಸಾವಿರ ಕೋಟಿಗಿಂತಲೂ ಅಧಿಕವಾಗುತ್ತದೆ. ಕೇರಳದಲ್ಲಿರುವ ಸರ್ಕಾರ ನಾಸ್ತಿಕ ಸರ್ಕಾರ. ದೇವರನ್ನು ನಂಬದಂತಹ ಸರ್ಕಾರ. ಐದು ಕೋಟಿ ಭಕ್ತರಿಗೆ ಅನೂಕೂಲವಾಗುವಂತಹ ಸೌಕರ್ಯ ಒದಗಿಸಿ ಕೊಡ್ತಿಲ್ಲ. ಕೇರಳ ಸರ್ಕಾರ ದೇವಸ್ಥಾನದ ಆದಾಯವನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುತ್ತಿದೆ. ದೇವಸ್ಥಾನ ಮಂಡಳಿಯನ್ನು ಆ ಸರ್ಕಾರ ಹೆದರಿಸುವ ಕೆಲಸ ಮಾಡ್ತಿದೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.
ಇಷ್ಟೆಲ್ಲಾ ತೊಂದರೆ ಅನುಭವಿಸುತ್ತಿರುವ ಅಯ್ಯಪ್ಪ ಮಾಲಾಧಾರಿಗಳಿಗೆ ಕರ್ನಾಟಕ ಸರ್ಕಾರ ನೆರವಿಗೆ ನಿಲ್ಲಬೇಕಾಗಿದೆ. ಕರ್ನಾಟಕ ಸರ್ಕಾರ ಕೇರಳದ ಸರ್ಕಾರದೊಂದಿಗೆ ಮಾತನಾಡಿ ಮೂಲಭೂತ ವ್ಯವಸ್ಥೆ ಒದಗಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಸಾವಿರಾರು ಕೋಟಿ ಆದಾಯದ ಸಂಪೂರ್ಣ ಹಣ ಭಕ್ತರ ಅನುಕೂಲಕ್ಕಾಗಿ ಉಪಯೋಗಿಸಬೇಕು. ಅನ್ನವಿತರಣೆ ಕಾರ್ಯಕ್ರಮ ಈ ಹಿಂದೆ ಇದ್ದಂತೆ ಜರುಗಬೇಕು. ಹಿಂದೂ ಸಂಘಟನೆಗಳು ಅನ್ನದಾನವನ್ನು ಉಚಿತವಾಗಿ ಮಾಡುತ್ತಿದ್ದರು. ಆದ್ರೆ ಕೆರಳ ಸರ್ಕಾರ ಬ್ಯಾನ್ ಮಾಡಿ, ಪೊಲೀಸ್ ವ್ಯವಸ್ಥೆಗೆ ನೀಡಿದೆ. ಇದರಿಂದಾಗಿ ಅನೇಕ ಭಕ್ತಾಧಿಗಳಿಗೆ ಅನ್ನ ಸಿಗ್ತಾ ಇಲ್ಲ. ಅಯ್ಯಪ್ಪ ದೇವಸ್ಥಾನದ ಮಂಡಳಿಗೆ ಎಲ್ಲರಿಗೂ ಅನ್ನದಾನದ ವ್ಯವಸ್ಥೆ ಸರಿಪಡಿಸುವಂತೆ ನಾವು ಮನವಿ ಮಾಡಿಕೊಳ್ಳುವವರಿದ್ದೇವೆ. ಭಕ್ತರಿಗೆ ನೀರಿನ ವ್ಯವಸ್ಥೆ ಹಾಗೂ ಸ್ನಾನ ಮಾಡುವ ವ್ಯವಸ್ಥೆ ಮಾಡಬೇಕಾಗಿದೆ. ಮೊದಲಿದ್ದ ಮಾದರಿಯಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.