ಬೆಳಗಾವಿ: ಚಾರಣಕ್ಕೆ (trekking) ಹೋಗಿ ಕಾಡಿನಲ್ಲಿ (forest) ಕಣ್ಮರೆಯಾಗಿದ್ದ ಬೆಳಗಾವಿಯ (belagavi) ಜಿಎಸ್‌ಎಸ್ (jss) ಕಾಲೇಜಿನ 9 ಮಂದಿ ವಿದ್ಯಾರ್ಥಿಗಳನ್ನು(students) ರಕ್ಷಣೆ ಮಾಡಲಾಗಿದೆ.
ಕಣಕುಂಬಿ (kanakumbi) ಅರಣ್ಯ ಪ್ರದೇಶದ ಮೂಲಕ ಕರ್ನಾಟಕ (karnataka)- ಗೋವಾ (goa) ಗಡಿಭಾಗದಲ್ಲಿರುವ ಜಾವಾಣಿ ಫಾಲ್ಸ್ (javani falls) ನೋಡಲು ಹೋಗಿದ್ದ ವಿದ್ಯಾರ್ಥಿಗಳು ಪಾರವಾಡ ಗ್ರಾಮದಿಂದ ಮೂರು ಕಿ.ಮೀ .
ದೂರದವರೆಗೆ ಬೈಕ್ ನಲ್ಲಿ ತೆರಳಿದ್ದರು.
ಬಳಿಕ ಕಾಲು ದಾರಿಯಲ್ಲೇ ಜಾವಾಣಿ ಫಾಲ್ಸ್‌ವರೆಗೆ ಹೋಗಿ ಸಾಕಷ್ಟು ಹೊತ್ತು ಕಳೆದಿದ್ದು, ಸಂಜೆಯ ಹೊತ್ತಿಗೆ ಮರಳಿ ಬರುವಾಗ ದಾರಿ ತಪ್ಪಿದೆ. ದಟ್ಟ ಕಾಡಿನಲ್ಲೇ ದಾರಿಗಾಗಿ ಅಲೆದಾಡುತ್ತಿದ್ದ ಯುವಕರು ನೆಟ್ವರ್ಕ್ ಸಿಕ್ಕ ತಕ್ಷಣವೇ ಫೋನ್ಮೂಲಕ ಸ್ನೇಹಿತರಿಗೆ ಮಾಹಿತಿ ನೀಡಿದರು.
ಬಳಿಕ ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆಯ 30 ಸಿಬ್ಬಂದಿ ಜಂಟಿಯಾಗಿ ರಾತ್ರಿ 8ರಿಂದ ಬೆಳಗ್ಗೆ 5 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿನಿಂದ ಹೊರಗೆ ಕರೆತಂದಿದ್ದಾರೆ.
ಖಾನಾಪುರ ಎಸಿಎಫ್ ಸಂತೋಷ ಚಹ್ವಾನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕಣಕುಂಬಿ ಆರ್‌ಎಫ್‌ಒ ಶಿವಕುಮಾರ್, ಭೀಮಗಡ ಆರ್‌ಎಫ್‌ಒ ರಾಕೇಶ, ಖಾನಾಪುರ ಆರ್‌ಎಫ್‌ಒ ನಾಗರಾಜ, ಡಿಆರ್‌ಎಫ್‌ಒ ವಿನಾಯಕ ಪಾಟೀಲ, ಗೋವಾದ ಮಹಾದಾಯಿ ವೈಲ್ಡ್ ಲೈಫ್ ಡಿಎಫ್‌ಒ ಆನಂದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಅಕ್ರಮ ಅರಣ್ಯ ಪ್ರದೇಶ ಪ್ರವೇಶ ಆರೋಪದಡಿ ಗೋವಾ ಅರಣ್ಯ ಇಲಾಖೆಯಿಂದ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.