ಬೆಂಗಳೂರು, ಡಿಸೆಂಬರ್ 31: ರೈಲಿನಲ್ಲಿ (Train) ಬೆಂಗಳೂರಿಗೆ (Bengaluru)ಗಾಂಜಾ(Marijuana) ಸಾಗಿಸಲು ಯತ್ನಿಸುತ್ತಿದ್ದ ಏಳು ಮಂದಿಯನ್ನು ರೈಲ್ವೇ ಪೊಲೀಸರು (Railway Police) ಬಂಧಿಸಿದ್ದು, ಐದು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ನಿತ್ಯಾನಂದ ದಾಸ್, ನಿಕೇಶ್ ರಾಣಾ, ಜಲಂಧರ್ ಕನ್ವರ್, ಸಾಗರ್ ಕನ್ವರ್, ರಾಜೇಶ್ ದಾಸ್ ಮತ್ತು ಅಮರ್ಜಿತ್ ಬಂಧಿತ ಆರೋಪಿಗಳು. ಐವರು ಆರೋಪಿಗಳು ಒಡಿಶಾದವರು, ಓರ್ವ ತ್ರಿಪುರದವ ಮತ್ತು ಇನ್ನೊಬ್ಬ ಬಿಹಾರ ಮೂಲದವ ಎಂದು ತಿಳಿದುಬಂದಿದೆ.
ಕಳೆದ ಹತ್ತು ದಿನಗಳಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ರೈಲುಗಳಲ್ಲಿ ರೈಲ್ವೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಶಾಂತಿ ಎಕ್ಸ್‌ಪ್ರೆಸ್, ಶೇಷಾದ್ರಿ ಎಕ್ಸ್‌ಪ್ರೆಸ್ ಮತ್ತು ಶಾಲಿಮಾರ್-ವಾಸ್ಕೋ-ಡ-ಗಾಮಾ ಅಮರಾವತಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಗಾಂಜಾ ಪತ್ತೆಯಾಗಿದೆ. 60 ಲಕ್ಷ ರೂಪಾಯಿ ಮೌಲ್ಯದ 60 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೈಯಪ್ಪನಹಳ್ಳಿ, ಬೆಂಗಳೂರು ಗ್ರಾಮಾಂತರ ಮತ್ತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಗಳಲ್ಲಿ ಐದು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪೊಲೀಸರ ಪ್ರಕಾರ, ಆರೋಪಿ ನಿತ್ಯಾನಂದ ದಾಸ್ ಮತ್ತು ರಾಜೇಶ್ ಬೆಂಗಳೂರಿನಲ್ಲಿ ಫುಡ್ ಡೆಲೆವರಿ ಬಾಯ್ ಏಜೆಂಟ್‌ಗಳಂತೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು.