ಕೊಪ್ಪಳ, ಡಿ.28: ಡಿಸೆಂಬರ್ 31 ರೊಳಗೆ ಗ್ಯಾಸ್ ಸಂಪರ್ಕ್ ಪಡೆದವರೆಲ್ಲರೂ ನಿಮಗೆ ಸೇವೆ ನೀಡುವ ಗ್ಯಾಸ್ ಏಜೆನ್ಸಿಯವರ ಬಳಿ ಹೋಗಿ ಇ ಕೆವೈಸಿ ಮಾಡಿಸಬೇಕು. ಇಲ್ಲದಿದ್ದರೆ ನಿಮ್ಮ ಸಬ್ಸಿಡಿ(Subsidy) ಹಣ ಬಂದಾಗುತ್ತದೆ. ಕೆವೈಸಿ ಮಾಡಿಸಿದ್ರೆ ನಿಮಗೆ ಕೇವಲ ಐನೂರು ರೂಪಾಯಿಗೆ ಸಿಲಿಂಡರ್ ಸಿಗುತ್ತೆ.ಇಲ್ಲದಿದ್ದರೆ, ಕಮರ್ಷಿಯಲ್ ಸಿಲಿಂಡರ್ ಬೆಲೆ ನೀಡಿ ಸಿಲಿಂಡರ್ ಖರೀದಿಸಬೇಕು ಎನ್ನುವ ವದಂತಿಯನ್ನು ಹಬ್ಬಿಸಿದ್ದಾರೆ. ಈ ಹಿನ್ನಲೆ ಕೊಪ್ಪಳ(Koppala) ನಗರ ಸೇರಿದಂತೆ ರಾಜ್ಯದ ವಿವಿಧ ಗ್ಯಾಸ್ ಏಜೆನ್ಸಿಗಳ ಅಂಗಡಿಗಳ ಮುಂದೆ ನೂರಾರು ಜನ ಕ್ಯೂ ನಿಲ್ಲುತ್ತಿದ್ದಾರೆ. ಬೆಳ್ಳೆಂಬೆಳಗ್ಗೆ ಆರು ಗಂಟೆಗೆ ತಮ್ಮ ಬೇರೆ ಕೆಲಸಗಳನ್ನು ಕೂಡ ಬಿಟ್ಟು, ಗ್ಯಾಸ್ ಅಂಗಡಿ ಮುಂದೆ ಬಂದು ಕಾಯುತ್ತಿದ್ದಾರೆ.
ಈ ವದಂತಿ ಬಾಯಿಂದ ಬಾಯಿಗೆ ಅನೇಕರಿಗೆ ಹಬ್ಬಿದ್ರೆ, ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹರದಾಡುತ್ತಿರುವ ವದಂತಿಯನ್ನು ನಂಬಿ, ತಾವು ಗ್ಯಾಸ್ ಸಂಪರ್ಕ ಪಡಿದಿರುವ ಏಜೆನ್ಸಿಗಳ ಮುಂದೆ ಬಂದು ಇ ಕೆವೈಸಿ ಮಾಡಲು ಮುಗಿಬೀಳುತ್ತಿದ್ದಾರೆ. ಇನ್ನು ದಿಢೀರನೆ ನೂರಾರು ಜನ ಬರುತ್ತಿರುವುದರಿಂದ ಏಜೆನ್ಸಿಗಳ ಅಂಗಡಿಗಳು ಜನರಿಂದ ತುಂಬಿ ತುಳಕುತ್ತಿವೆ.