ಬೆಂಗಳೂರು, (ಡಿಸೆಂಬರ್ 28): ಕನ್ನಡ ನಾಮಫಲಕ (Kannada Board) ಅಳವಡಿಸುವ ಸಂಬಂಧ ಪ್ರತಿಭಟನೆ ಮಾಡಿದ್ದ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike)ಕಾರ್ಯಕರ್ತರ ಬಂಧನದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಸಿಡಿದೆದ್ದಿವೆ. ಇದರ ಬೆನ್ನಲ್ಲೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ (Siddaramaiah) ದಿಢೀರ್ ಹಿರಿಯ ಅಧಿಕಾರಿಗಳ ಜೊತೆ ಸಭೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.60ರಷ್ಟು ಕನ್ನಡದಲ್ಲಿಯೇ ಬೋರ್ಡ್ ಇರಬೇಕು. 2024ರ ಫೆಬ್ರುವರಿ 28ರೊಳಗೆ ಅಂಗಡಿಗಳ ಬೋರ್ಡ್ ಚೇಂಜ್ ಮಾಡಬೇಕು. ಜಾಹೀರಾತುಗಳಲ್ಲೂ ಸರ್ಕಾರದ ನಿಯಮ ಪಾಲಿಸಬೇಕು. ನಿಯಮ ಜಾರಿಗೆ ವಿಳಂಬ ಆಗಿರುವುದು ನಿಜ. ಇನ್ಮುಂದೆ ವಿಳಂಬ ಮಾಡದಂತೆ ಕ್ರಮ ವಹಿಸಲಾಗುತ್ತೆ ಎಂದು ಸ್ಪಷ್ಟಪಡಿಸಿದರು.
ನಾಮಫಲಕಗಳು ಶೇಕಡಾ 50ರಷ್ಟು ಕನ್ನಡದಲ್ಲೇ ಇರಬೇಕು. ಬಾಕಿ ಅರ್ಧದಷ್ಟು ಬೇರೆ ಭಾಷೆಯಲ್ಲಿಯರಬೇಕು. ಈ ಬಗ್ಗೆ 2018ರಲ್ಲಿಯೇ ಕಾನೂನು ಮಾಡಿ ಸುತ್ತೋಲೆ ಹೊರಡಿಸಲಾಗಿದೆ. ಆದ್ರೆ, ಇದೀಗ ಶೇ.60ರಷ್ಟು ಕನ್ನಡದಲ್ಲಿಯೇ ಬೋರ್ಡ್ ಇರಬೇಕು. ಹಿಂದಿನ ಸುತ್ತೋಲೆಯಲ್ಲಿ ಶೇ.50ರಷ್ಟು ಎಂದು ಆಗಿತ್ತು. ಹಾಗಾಗಿ ಅದಕ್ಕೆ ತಿದ್ದುಪಡಿ ತರುವುದಕ್ಕೆ ಇಂದಿನ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಹಾಗಾಗಿ 2024ರ ಫೆ.28ರೊಳಗೆ ಬೋರ್ಡ್ ಚೇಂಜ್ ಮಾಡಬೇಕು. ಜಾಹೀರಾತುಗಳಲ್ಲೂ ಸರ್ಕಾರದ ನಿಯಮ ಪಾಲಿಸಬೇಕು. ನಿಯಮ ಜಾರಿಗೆ ವಿಳಂಬ ಆಗಿರುವುದು ನಿಜ . ಆದ್ರೆ, ಇನ್ಮುಂದೆ ವಿಳಂಬ ಮಾಡದಂತೆ ಕ್ರಮ ವಹಿಸಲಾಗುತ್ತೆ ಎಂದು ಹೇಳಿದರು.